ಈ ಬಾರಿಯ ಚುನಾವಣೆ ನಮಗೆ ಪಾಠ ಕಲಿಸಿದೆ : ಮಾಜಿ ಸಚಿವ ಸುನಿಲ್ ಕುಮಾರ್
ಕಾರ್ಕಳ, ಸಜ್ಜನಿಕೆಗೆ ಬೆಲೆಕೊಟ್ಟವರು ನಾವು ಅಭಿವೃದ್ಧಿ ಮಾಡಿ ಎಲ್ಲವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವೆಂದು ಎಂದು ಕೊಂಡೆವು. ಆದರೆ ಅದು ಒಳ್ಳೇದಲ್ಲ ಎನ್ನುವುದು ಚುನಾವಣೆ ನಮಗೆ ಪಾಠ ಕಲಿಸಿದೆ ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ಹೇಳಿದರು. ಬಿಜೆಪಿ ಕಾರ್ಕಳ ವತಿಯಿಂದ ನಗರದ ಬಂಡಿ ಮಠದಲ್ಲಿ ನಡೆದ ಕ್ಷೇತ್ರ ಮತದಾರರಿಗೆ ವಂದನೆ ಹಾಗೂ ಕಾರ್ಯಕರ್ತರಿಗೆ ಅಭಿನಂದನ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿ, ಅವರು ಮಾತನಾಡಿದರು. ನಾನು ಚಿಕ್ಕವನಿರುವಾಗಲೇ ಹೋರಾಟ ಮಾಡಿಕೊಂಡು ಬಂದವನು ನಾನು ಟೀಕೆಗಳು ಎಲ್ಲಿ ಮೀರಿದಾಗಲೂ ಮಾತನಾಡಲಿಲ್ಲ ಎಂದರು ಬಿಜೆಪಿ ಗೆಲುವಿಗೆ ಕೇವಲ 65 ಸೀಟುಗಳಿಗೆ ತೃಪ್ತಿ ಪಟ್ಟರು ಅವಲೋಕನವನ್ನು ಪಕ್ಷ ಮಾಡುತ್ತದೆ. ದೇಶಕ್ಕೆ ಮೋದಿ ಅನಿರ್ವಾಯ ಎನ್ನುವಂತದ್ದು ನಮಗೆಲ್ಲ ಗೊತ್ತಿದೆ, ಇನ್ನು ಮುಂದೆ ಬರುವ ಲೋಕಸಭೆಗೆ ಸಿದ್ಧತೆಯನ್ನು ನಾವು ಒಟ್ಟಾಗಿ ಮಾಡೋಣ ಎಂದರು.