ಕಾರ್ಕಳ ತಾಲೂಕಿನಾದ್ಯಾಂತ ಸಂಭ್ರಮದ ನಾಗರ ಪಂಚಮಿ
ಕಾರ್ಕಳ ತಾಲೂಕಿನ ವಿವಿಧ ನಾಗ ಸಾನಿಧ್ಯಗಳಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ನಾಗಬನಗಳಲ್ಲಿ ಭಕ್ತಾದಿಗಳು ನಾಗನಿಗೆ ಹಾಲು, ಸೀಯಾಳ ಸಮರ್ಪಿಸುವ ದೃಶ್ಯ ಕಂಡು ಬಂತು.
ನಾಗರ ಪಂಚಮಿ ಪ್ರಯುಕ್ತ ದನದ ಶುದ್ಧ ಹಾಲಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಕಾರ್ಕಳದ ಪೆರುವಾಜೆ ಬಳಿ ಇರುವ ಹಾಲು ಮಾರಾಟ ಕೇಂದ್ರದ ಬಳಿ ಬೆಳಿಗ್ಗೆ 6 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಹಾಲು ಖರೀದಿಸಿದರು.
ನಾಗರ ಪಂಚಮಿ ಪ್ರಯುಕ್ತ ಅರಶಿನ ಎಲೆಗೆ ಭಾರೀ ಬೇಡಿಕೆ ಇದ್ದು ಹಳ್ಳಿಗಳಿಂದ ಎಲೆಗಳನ್ನು ತಂದು ಅಂಗಡಿಗಳಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಸೀಯಾಳ, ಬಾಳೆಹಣ್ಣು, ಹೂ ಇತ್ಯಾದಿಗಳಿಗೂ ಭಾರೀ ಬೇಡಿಕೆಯಿದ್ದು ಜನ ಖರೀದಿಸುವ ದೃಶ್ಯ ಕಂಡು ಬಂತು.