Home Posts tagged #nagarapanchami

ಕಾಪುವಿನಲ್ಲಿ ಜೀವಂತ ನಾಗಗಳ ಆರಾಧನೆ..!

ಕಾಪು ತಾಲೂಕಿನ ಮಜೂರು-ಮಲ್ಲಾರು ಗೋವರ್ಧನ ಭಟ್ ಅವರ ಮನೆಯಲ್ಲಿ ಮನೆಯವರೆಲ್ಲರೂ ಜತೆ ಸೇರಿ ಜೀವಂತ ನಾಗರ ಹಾವಿಗೆ ಆರತಿ ಬೆಳಗಿ ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು. ಗಾಯಗೊಂಡ ನಾಗರ ಹಾವುಗಳನ್ನು ಮನೆಗೆ ತಂದು ಶುಶ್ರೂಷೆ ನೀಡಿ, ಆರೈಕೆ ಮಾಡುವ ಉರಗ ಪ್ರೇಮಿ ಮಜೂರು ಗೋವರ್ಧನ ಭಟ್ ಅವರು ಪ್ರತೀ ವರ್ಷ ತಮ್ಮ ಮನೆಯಲ್ಲಿ ಶುಶ್ರೂಷೆಯಲ್ಲಿರುವ ನಾಗರ ಹಾವಿಗೆ ತನು ಎರೆದು,

ಮಂಗಳೂರಿನಲ್ಲಿ ಕೇದಗೆ ಬದಲಿಗೆ ಮುಂಡೇವು ಮಾರಿದರು…!

ನಾಗನಿಗೆ ಪ್ರಿಯವಾದ ಕೇದಗೆಗೆ ನಾಗರ ಪಂಚಮಿಯಂದು ಭಾರೀ ಬೇಡಿಕೆಯಿದ್ದು ಇದೀಗ ಮಂಗಳೂರಿನ ಕಾರ್‍ಸ್ಟ್ರೀಟ್‍ನಲ್ಲಿ ಕೇದಗೆಯ ಬದಲಿಗೆ ಮುಂಡೇವು ಎಲೆಯನ್ನು ಭಕ್ತರಿಗೆ ಮಾರಾಟ ಮಾಡಿ ಯಾಮಾರಿಸಿದ ಕುರಿತ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಪಂಚಮಿ ದಿನದಂದು ನಾಗಾರಾಧನೆಗೆ ಕೇದಗೆ ಎಂದು ಖರೀದಿಸಿ ತಂದ ಬಳಿಕ ಭಕ್ತರೊಬ್ಬರು ಇದನ್ನು ಮುಂಡೇವು ಎಲೆಯೆಂದು ಖಚಿತಪಡಿಸಿದ್ದು ಗ್ರಾಹಕರು ಜಾಗೃತರಾಗಿರುವಂತೆ

ಕಾರ್ಕಳ ತಾಲೂಕಿನಾದ್ಯಾಂತ ಸಂಭ್ರಮದ ನಾಗರ ಪಂಚಮಿ

ಕಾರ್ಕಳ ತಾಲೂಕಿನ ವಿವಿಧ ನಾಗ ಸಾನಿಧ್ಯಗಳಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ನಾಗಬನಗಳಲ್ಲಿ ಭಕ್ತಾದಿಗಳು ನಾಗನಿಗೆ ಹಾಲು, ಸೀಯಾಳ ಸಮರ್ಪಿಸುವ ದೃಶ್ಯ ಕಂಡು ಬಂತು. ನಾಗರ ಪಂಚಮಿ ಪ್ರಯುಕ್ತ ದನದ ಶುದ್ಧ ಹಾಲಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಕಾರ್ಕಳದ ಪೆರುವಾಜೆ ಬಳಿ ಇರುವ ಹಾಲು ಮಾರಾಟ ಕೇಂದ್ರದ ಬಳಿ ಬೆಳಿಗ್ಗೆ 6 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಹಾಲು ಖರೀದಿಸಿದರು. ನಾಗರ ಪಂಚಮಿ

ಕರಾವಳಿಯಲ್ಲಿ ಸರಳ ನಾಗರ ಪಂಚಮಿ ಆಚರಣೆ : ದೇವಸ್ಥಾನದಲ್ಲಿ ಬೆರಳಣಿಕೆಯ ಭಕ್ತಾಧಿಗಳು

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ನಾಗರಪಂಚಮಿಯನ್ನು ಇಂದು ಕರಾವಳಿಯಾದ್ಯಂತ ಆಚರಿಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಆಚರಣೆ ಸರಳವಾಗಿದ್ದು, ನಗರದ ಪ್ರಮುಖ ನಾಗ ಸನ್ನಿಧಿಯಾದ ಕುಡುಪು ಸೇರಿದಂತೆ ದೇವಸ್ಥಾನ ಗಳಲ್ಲಿ ವೈದಿಕ ವಿಧಿ ವಿಧಾನಗಳು, ವಿಶೇಷ ಪೂಜೆಯೊಂದಿಗೆ ನಾಗಾರಾಧನೆ ನಡೆಯುತ್ತಿದೆ. ವಿಶೇಷ ಸೇವೆಗಳಿಗೆ ಅವಕಾಶ ಇಲ್ಲವಾಗಿದ್ದು, ಭಕ್ತರು ತಮ್ಮ ಕುಟುಂಬದ ನಾಗಬನಗಳಲ್ಲಿ ಸೀಯಾಳಾಭಿಷೇಕ, ಹಾಲೆರೆಯುವ ಮೂಲಕ ಪೂಜೆ