ಕಾರ್ಕಳ : ಹೊಂಡಮಯ ರಸ್ತೆಯಿಂದ ನರಕಯಾತನೆ

ಹವಲ್ದಾರ್ ಬೆಟ್ಟು ರಸ್ತೆ ಹೊಂಡಮಯವಾಗಿದ್ದು, ಚರಂಡಿಯಿಲ್ಲದೆ ಮಳೆ ನೀರು ರಸ್ತೆ ಮಧ್ಯೆಯೇ ಹರಿದು ಕೆಸರುಮಯವಾಗಿದೆ. ಸಂಚಾರಕ್ಕೆ ಯೋಗ್ಯವಲ್ಲದ ಈ ರಸ್ತೆಯ ದು:ಸ್ಥಿತಿಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆಯುದ್ದಕ್ಕೂ ಹೊಂಡಗಳು ಮತ್ತು ತುಂಬಿದ ಮಳೆ ನೀರಿನಿಂದ ವಾಹನ ಸಂಚಾರಕ್ಕೆ ತ್ರಾಸದಾಯಕ ಮಾತ್ರವಲ್ಲದೆ ಪಾದಚಾರಿಗಳ ಓಡಾಟಕ್ಕೂ ಕಷ್ಟಕರವಾಗಿದೆ.

karkala road

ಪುರಸಭಾ ವ್ಯಾಪ್ತಿಗೆ ಬರುವ ಈ ರಸ್ತೆ ಗಾಂಧಿ ಮೈದಾನ ಹಾಗೂ ಕಾರ್ಕಳ ಪೇಟೆಯನ್ನು ಸಂಪರ್ಕಿಸುವ ಕೂಡುರಸ್ತೆಯಾಗಿದೆ. ಇದರಲ್ಲಿ ಪ್ರತಿನಿತ್ಯ ಶಾಲಾ ವಾಹನ ಮತ್ತು ವೆಂಕಟರಮಣ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳ ವಾಹನ ಹಾಗೂ ಸ್ಥಳೀಯರ ವಾಹನ ಸಂಚಾರವಿರುತ್ತದೆ. ಆದರೆ, ಅವವ್ಯಸ್ಥಿತ ರಸ್ತೆಯಿಂದಾಗಿ ಇಲ್ಲಿ ಸಂಚರಿಲು ಅನಾನುಕೂಲವಾಗಿದೆ.

karkala road

ಚರಂಡಿ ನಿರ್ಮಾಣ ಮತ್ತು ರಸ್ತೆ ದುರಸ್ತಿ ಬಗ್ಗೆ ಕಳೆದ 6 ತಿಂಗಳಿಂದ ಪುರಸಭೆಯವರಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ. ಪರಿಣಾಮವಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆ ನೀರಿನಿಂದ ರಸ್ತೆ ಕೆಸರುಮಯವಾಗಿದ್ದರಿಂದ ಮತ್ತು ಗುಂಡಿಗಳಲ್ಲೇ ನೀರು ತುಂಬಿದ್ದರಿಂದ ಪಾದಚಾರಿಗಳೂ ಓಡಾಡಲು ಪರದಾಡುವಂತಾಗಿದೆ. ಇನ್ನಾದರೂ ಈ ಕುರಿತು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿದ್ದಾರೆ.

Related Posts

Leave a Reply

Your email address will not be published.