ಕಾರ್ಕಳ: ರಸ್ತೆ ಬದಿಯಿದ್ದ ಅಪಾಯಕಾರಿ ಮರ ತೆರವು
ಕಾರ್ಕಳ ಪುರಸಭೆ ವ್ಯಾಪ್ತಿಯ ಆನೆಕೆರೆ ಮಸೀದಿಯ ಬಳಿ ಇರುವ ಅಪಾಯಕಾರಿ ಮರ ತೆರವು ಕಾರ್ಯ ನಡೆಯಿತು.
ಬೃಹತ್ಕಾರದ ಮರದ ಕೊಂಬೆಗಳನ್ನು ತೆರವು ಗೊಳಿಸುವ ಕಾರ್ಯವನ್ನು ಅರಣ್ಯ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು. ಪ್ರತಿನಿತ್ಯ ನೂರಾರು ವಾಹನಗಳು ಮತ್ತು ಸಾವಿರಾರು ನಾಗರಿಕರು ಸಂಚರಿಸುವ ರಸ್ತೆಯ ಪಕ್ಕದಲ್ಲಿ ತುಂಬಾ ಹಳೆಯದಾದ ಬೃಹತ್ಕಾರದ ಮರ ತೀರ ಅಪಾಯಕಾರಿಯಾಗಿತ್ತು.
ಸಾರ್ವಜನಿಕರು ಅನೇಕ ಬಾರಿ ಪುರಸಭೆಗೆ ಮತ್ತು ಅರಣ್ಯ ಇಲಾಖೆಗೆ ಮರ ತೆರವಿಗೆ ಮನವಿಗಳನ್ನು ಸಲ್ಲಿಸಿದ್ದರು. ಅರಣ್ಯ ಇಲಾಖೆಯ ಮುತವರ್ಜಿಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಮಿಕರು ಕೊಂಬೆಗಳನ್ನು ಕಡಿದು ತೆರವುಗೊಳಿಸಿದರು. ಮೆಸ್ಕಾಂ ಇಲಾಖೆ ಸಿಬ್ಬಂದಿ, ಕಾರ್ಕಳ ಆರಕ್ಷಕ ಠಾಣೆಯ ಸಿಬ್ಬಂದಿಗಳು ಸಹಕರಿಸಿದ್ದರು.