ನ್ಯೂಯಾರ್ಕ್ ಫ್ಯಾಶನ್ ವೀಕ್ ನಲ್ಲಿ ಮಿಂಚಿದ ಕನ್ನಡತಿ ಮಮತಾ ಪುಟ್ಟಸ್ವಾಮಿ

ನ್ಯೂಯಾರ್ಕ್ ಫ್ಯಾಶನ್ ವೀಕ್ ನಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ಜಗತ್ತಿನೆಲ್ಲೆಡೆಯ ಮಾಡೇಲ್ ಗಳು ಹಾತೊರೆಯುತ್ತಿರುತ್ತಾರೆ. ಇಂತಹ ಅಪೂರ್ವ ಅವಕಾಶವನ್ನು ಗಿಟ್ಟಿಸಿಕೊಂಡ ಕನ್ನಡತಿ ಬ್ಯೂಟಿ ಕ್ವೀನ್ ಹಾಗೂ ಮೊಡೇಲ್ ಮಮತಾ ಪುಟ್ಟಸ್ವಾಮಿ ಅವರು ಈ ಬಾರಿಯ ನ್ಯೂಯಾರ್ಕ್ ಫ್ಯಾಶನ್ ವೀಕ್‍ನಲ್ಲಿ ಮಿಂಚಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಮಮತಾ ಪುಟ್ಟಸ್ವಾಮಿ ಅವರು ಸೆ.10 ರಂದು ನಡೆದ ರ್‍ಯಾಂಪ್ ವಾಕ್ ನಲ್ಲಿ ಪ್ರಸಿದ್ಧ ಡಿಸೈನರ್ ಅಂಜಲಿ ಪೋಗಾಟ್ ಅವರ ಡಿಸೈನರ್ ಡ್ರೀಮ್ ಗೌನ್ ಧರಿಸಿ ಫ್ಯಾಶನ್ ಪ್ರೀಯರ ಗಮನ ಸೆಳೆದರು.

Mamata Puttaswamy


ಮೈಸೂರು ಮೂಲದವರಾಗಿರುವ ಮಮತಾ ಪುಟ್ಟಸ್ವಾಮಿ ಅವರು 2010 ರಿಂದ ಅಮೆರಿಕದ ಕನೆಕ್ಟಿಕಟ್‍ರಾಜ್ಯದಲ್ಲಿ ನೆಲೆಸಿದ್ದಾರೆ. ಶಿಕ್ಷಕಿ ವೃತ್ತಿಯಲ್ಲಿರುವ ಮಮತಾ ಅವರು ಫಿಟ್‍ನೆಸ್ ತರಬೇತುದಾರರಾಗಿ, ಬಾಲಿವುಡ್ ನೃತ್ಯ ತರಬೇತುದಾರರಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.

Mamata Puttaswamy


ಮಮತಾ ಪುಟ್ಟಸ್ವಾಮಿ ಅವರು ಮಿಸೆಸ್ ಇಂಡಿಯಾ ಕನೆಕ್ಟಿಕಟ್ ಸೌಂದರ್ಯ ರಾಣಿ ಕೀರಿಟವನ್ನು ಗೆದ್ದವರಾಗಿದ್ದು ಮಾತ್ರವಲ್ಲದೆ ಮಿಸೆಸ್ ಇಂಡಿಯಾ ಯು.ಎಸ್.ಎ. ಸೌಂದರ್ಯ ಸ್ಪರ್ಧೆಯಲ್ಲಿ ಅಂತಿಮ ಐದರ ಸುತ್ತಿಗೆ ಕೂಡ ಮಮತಾ ಆಯ್ಕೆಯಾಗಿದ್ದರು.ಕೋವಿಡ್ ಜಾಗೃತಿ ಜಾಹಿರಾತಿಗೆ ರೂಪದರ್ಶಿಯಾಗಿ ಕನೆಕ್ಟಿಕಟ್ ರಾಜ್ಯ ಸರಕಾರವು ಭಾರತದ ಪ್ರತಿನಿಧಿಯಾಗಿ ಮಮತಾ ಅವರನ್ನು ಆಯ್ಕೆ ಮಾಡಿತ್ತು. ಈ ಜಾಹಿರಾತು ವಿವಿಧ ಭಾಷೆಗಳ ಪತ್ರಿಕೆ, ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗಿತ್ತು.

Related Posts

Leave a Reply

Your email address will not be published.