ಕಟಪಾಡಿ: ಕಾರು ಡಿಕ್ಕಿ ದಂಪತಿಗೆ ಗಾಯ

ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಗಾಯಗೊಂಡ ಘಟನೆ ಕಟಪಾಡಿ ಬಳಿ ನಡೆದಿದೆ. ತೆಂಕ ಎರ್ಮಾಳು ನಿವಾಸಿಗಳಾದ ದೀರಜ್ ಹಾಗೂ ಅವರ ಪತ್ನಿ ಪವಿತ್ರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಪರಿಣಾಮ ಕಟಪಾಡಿ ಪೇಟೆ ಬಳಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕವನ್ನು ಏರಿ ನಂತರ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ.
