ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಗಾಯಗೊಂಡ ಘಟನೆ ಕಟಪಾಡಿ ಬಳಿ ನಡೆದಿದೆ. ತೆಂಕ ಎರ್ಮಾಳು ನಿವಾಸಿಗಳಾದ ದೀರಜ್ ಹಾಗೂ ಅವರ ಪತ್ನಿ ಪವಿತ್ರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಪರಿಣಾಮ
ಸನ್ ಮ್ಯಾಟ್ರಿಕ್ಸ್ ಪಿಚರ್ಸ್ ಮತ್ತು ಫಿಲಂ ವೀಲ್ಹ್ ಸ್ಟುಡಿಯೋಸ್ ಇವರ ಸಹಯೋಗದೊಂದಿಗೆ ರಜ್ಹಾಕ್ ಪುತ್ತೂರು ನಿರ್ದೇಶನದ ” ಸ್ಕೂಲ್ ಲೀಡರ್” ಕನ್ನಡ ಸಿನಿಮಾದ ಚಿತ್ರೀಕರಣ ಖ್ಯಾತ ಕಲಾವಿಧರ ಭಾಗವಹಿಸುವಿಕೆಯೊಂದಿಗೆ ಕಟಪಾಡಿಯ ಖಾಸಗಿ ಶಾಲೆಯೊಂದರಲ್ಲಿ ಭರದಿಂದ ಸಾಗುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ತುಳುನಾಡಿನ ಕಲಾ ಮುತ್ತುಗಳಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಜೆ ಅಭಿನಯಿಸುತ್ತಿದ್ದಾರೆ. ಹಾಗೆ ಜಿಲ್ಲೆ ಹಾಗೂ ಹೊರ
ಇಕ್ಕಟ್ಟಾದ ಕಟಪಾಡಿ ಪೇಟೆಭಾಗದಲ್ಲಿ ಹೆದ್ದಾರಿ ದುರಸ್ಥಿ ಕಾರ್ಯ ಹಗಲಲ್ಲೇ ನಡೆಸಿದ್ದರ ಪರಿಣಾಮ ಮೈಲುದ್ಧ ವಾಹನಗಳು ಬ್ಲಾಕ್ ಆಗಿ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತ್ತಾಗಿದೆ. ಬ್ಲಾಕ್‍ನಲ್ಲಿ ಅಗ್ನಿಶಾಮಕ ವಾಹನ ಕೂಡಾ ಸಿಲುಕಿಕೊಂಡಿತ್ತು. ಈ ದಿನ ಬಹಳಷ್ಟು ಕಾರ್ಯಕ್ರಮಗಳು ಇದ್ದು ವಾಹನ ದಟ್ಟಣೆ ಅತಿಯಾಗಿದ್ದು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಕಟಪಾಡಿ ಪೇಟೆಯಲ್ಲಿ ಅಂಡರ್ ಪಾಸ್ ಬೇಡಿಕೆ ಇದ್ದರೂ ಜನಪ್ರತಿನಿಧಿಗಳ
ಹಣಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ತಯಾರಿದ್ದ ಈ ಕಾಲಘಟ್ಟದಲ್ಲಿ, ಯಾವುದೋ ಕುಟುಂಬದ ಪರಿಚಯವೇ ಇಲ್ಲದ ಎರಡು ತಿಂಗಳ ಮಗುವಿನ ಚಿಕಿತ್ಸಾ ವೆಚ್ಚ ಭರಿಸುವ ನಿಟ್ಟಿನಲ್ಲಿ ಕಟಪಾಡಿ ಪ್ರೇಂಡ್ಸ್ ಸಂಸ್ಥೆಯ ಸದಸ್ಯರು ಹುಲಿವೇಷ ಹಾಕಿ ಮಾನವೀಯತೆ ಭೂಮಿಯಲ್ಲಿ ಇನ್ನೂ ಸತ್ತಿಲ್ಲ ಎಂಬುದನ್ನು ಸಾಭೀತು ಪಡಿಸಿದ್ದಾರೆ. ಹುಲಿವೇಷ ಎಂದರೆ ಬೇರೆ ವೇಷಗಳಂಥಲ್ಲ…ಇದಕ್ಕೆ ಅದರದ್ದೇ ಆದ ರೀತಿ ರಿವಾಜುಗಳಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆಯುವುದೇ ಈ ಹುಲಿವೇಷ. ಬಣ್ಣ ಹಚ್ಚುವ ಮುನ್ನ
ಕಾರು ಚಾಲಕನ ಅವಾಂತರದಿಂದಾಗಿ ರಸ್ತೆಯಂಚಿನಲ್ಲಿ ನಿಲ್ಲಿಸಿದ ಕಾರು ಸಹಿತ ಸ್ಕೂಟರ್ ತೀವ್ರ ಜಖಂ ಗೊಂಡು ಇಬ್ಬರು ಗಾಯಗೊಂಡ ಘಟನೆ ಕಟಪಾಡಿ ಪೇಟೆಯಲ್ಲಿ ರಾತ್ರಿ ಸಂಭವಿಸಿದೆ. ಉಡುಪಿ ಕಡೆಯಿಂದ ಕಟಪಾಡಿ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಅತೀ ವೇಗವಾಗಿ ಮುನ್ನುಗ್ಗಿ ಬಂದ ಕಾರು ರಸ್ತೆಯಂಚಿನಲ್ಲಿ ನಿಲ್ಲಿಸಿದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ನಿಲ್ಲದೆ ಸ್ಕೂಟರ್ ಗೆ ಡಿಕ್ಕಿಯಾಗಿ ಪಕ್ಕದ ಪಾಸ್ಟ್ ಫುಡ್ ಅಂಗಡಿಯೊಳಗೆ ನುಗ್ಗಿದೆ. ಅಂಗಡಿಯಾತನಿಗೆ ಹಾಗೂ ಆಹಾರ ಸೇವಿಸುತ್ತಿದ್ದ
ಕಟಪಾಡಿ : ಸುರತ್ಕಲ್ ನಲ್ಲಿ ಲಾರಿ ಮಟ್ಟು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಉಡುಪಿ ಕಟಪಾಡಿ ಬಳಿಯ ಮಟ್ಟು ನಿವಾಸಿ, ದೇಗುಲದ ಅರ್ಚಕ ಅಕ್ಷಯ್ ಕೆ. ಆರ್ (33) ದುರ್ಮರಣ ಹೊಂದಿದ್ದಾರೆ. ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿದ್ದ ಅಕ್ಷಯ್ ಸುರತ್ಕಲ್ ನಲ್ಲಿ ಪೂಜೆ ಮುಗಿಸಿ ಕಟಪಾಡಿ ಗೆ ಹಿಂತಿರುಗಿ ಬರುವ ವೇಳೆಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಮೃತರು ತಾಯಿಯನ್ನು ಅಗಲಿದ್ದಾರೆ