ಕೊಲ್ಲೂರು : ವ್ಯಕ್ತಿಯ ಮೇಲೆ ಚಿರತೆ ದಾಳಿ, ಗಂಭೀರ ಗಾಯ

ಚಿರತೆಯೊಂದು ವ್ಯಕ್ತಿಯೋರ್ವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಕೊಲ್ಲೂರು ಸಮೀಪದ ನಾಗೋಡಿಯ ಕಂಚಿಕರೆ ಎಂಬಲ್ಲಿ ನಡೆದಿದೆ.
ಚಿರತೆ ದಾಳಿಯಿಂದ ಗಣೇಶ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ನಿನ್ನೆ ತಡರಾತ್ರಿ ಗಣೇಶ್ ಅವರ ಮನೆಯ ಸಮೀಪವೇ ಚಿರತೆ ಕಂಡುಬಂದಿದ್ದು, ನಾಯಿಯ ಕೂಗಾಟ ಕೇಳಿ ಗಣೇಶ್ ಮನೆಯಿಂದ ಹೊರ ಬಂದಾಗ ಅವರ ಮೇಲೆ ಎರಗಿದೆ. ಗಂಭೀರ ಗಾಯಗೊಂಡಿದ್ದ ಗಣೇಶ್ ಅವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು.