ಕುಂಪಲ : ನವ ವಧು ವರರ ರಂಗ ರುಕ್ಮಿಣಿ ಸಮಾಗಮ ಕಾರ್ಯಕ್ರಮ

ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವತಿಯಿಂದ ನವ ವಧು ವರರ ರಂಗ ರುಕ್ಮಿಣಿ ಸಮಾಗಮ ಕಾರ್ಯಕ್ರಮ ನಡೆಯಿತು.
ಉದ್ಯಮಿ ಕಂಪಾರ್ಟ್ ಇನ್ ಮಾಲಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮಕ್ಕೆ ದೀಪಬೆಳಗಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಜೀವನವನ್ನು ರೂಪಿಸಲು ನಮಗೆ ಸಂಸ್ಕಾರ ಬಹಳ ಮುಖ್ಯ, ಇದನ್ನು ಅರಿತಾಗ ಮಾತ್ರ ನಮ್ಮ ಜೀವನ ಸುಂದರವಾಗುತ್ತದೆ, ಈ ನಿಟ್ಟಿನಲ್ಲಿ ರಂಗ ರುಕ್ಮಿಣಿ ಕಾರ್ಯಕ್ರಮ ಶ್ಲಾಘನೀಯ. ಹೊಸ ಬಾಳಿನಲ್ಲಿ ಸದಾ ಕಾಲ ನಗುವಿನೊಂದಿಗೆ ಬದುಕಿ ಎಂದು ಹಾರೈಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಬೋದಿನಿ ವಿಭಾಗದ ಮುಖ್ಯಸ್ಥ ಗಜಾನನ ಪೈ ಮಾತನಾಡಿ ದಾಂಪತ್ಯ ಜೀವನವೆಂದರೆ ಸೋತು ಗೆದ್ದಂತೆ ಇರಬೇಕು, ನೀರಿನಲ್ಲಿ ಸಕ್ಕರೆ ಕರಗಿದಂತಿರಬೇಕು ಎಂದು ನವದಂಪತಿಗಳಿಗೆ ಸ್ಪೂರ್ತಿದಾಯಕ ಮಾತನಾಡಿದರು. ಬಾಲಕೃಷ್ಣ ಮಂದಿರದ ಸ್ಥಾಪಕಾಧ್ಯಕ್ಷ ಸತೀಶ್ ಕುಂಪಲ ಪ್ರಾಸ್ತವಿಕವಾಗಿ ಮಾತನಾಡಿ ನಮ್ಮೊಳಗೆ ಜಾಗೃತಿ ಮೂಡಿಸಲು ಮತ್ತು ಮುಂದಿನ ಪೀಳಿಗೆ ಜಾಗೃತಿಯಾಗಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.
ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಶ್ರೀಮತಿ ದಿವ್ಯ ಸತೀಶ್ ಶೆಟ್ಟಿ, ಕುಂಪಲ ಬಾಲಕೃಷ್ಣ ಮಂದಿರದ ಅಧ್ಯಕ್ಷ ಪ್ರಹ್ಲಾದ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಎಸ್.ಕುಂಪಲ, ಸಂಘಟನಾ ಕಾರ್ಯದರ್ಶಿ ವೀಂದ್ರ ಕುಂಪಲ, ಮಹಿಳಾ ವಿಭಾಗದ ಅಧ್ಯಕ್ಷ ಮಮತಾ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಗಾಯತ್ರಿ, ಉತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಅಂಚನ್, ಗೌರವಾಧ್ಯಕ್ಷ ಚನ್ನಿಯ ನಾಯಕ್ ಇನ್ನಿತರು ಉಪಸ್ಥಿತರಿದ್ದರು.
