ಪಡುಬಿದ್ರಿ : ಗೃಹಜ್ಯೋತಿ ಹೆಸರಲ್ಲಿ ಹಣ ಪಡೆಯುತ್ತಿದ್ದ ಸೈಬರ್ ಮಾಲಕ
ಗೃಹಜ್ಯೋತಿ ಯೋಜನೆಯ ನೋಂದಾಣಿಗೆ ಪಡುಬಿದ್ರಿ ಸೈಬರ್ ಒಂದರಲ್ಲಿ 100 ರೂಪಾಯಿ ಪಡೆಯುತ್ತಿರುವುದನ್ನು ಗ್ರಾಮಸ್ಥರು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಗ್ರಾ.ಪಂ.ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂಥಹ ಸೈಬರ್‍ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್ ಅವರು, “ಗೃಹಜ್ಯೋತಿ” ಯೋಜನೆಯನ್ನು ದುರುಪಯೋಗ ಮಾಡಿಕೊಂಡ ಪಡುಬಿದ್ರಿಯ ಗ್ರಾ.ಪಂ. ಮುಂಭಾಗದ ಸೈಬರ್ ಸೆಂಟರ್‍ನಲ್ಲಿ ಇಪ್ಪತ್ತು ರೂಪಾಯಿ ಪಡೆಯಬೇಕಾಗಿದ್ದರೂ, ಯಾವುದೇ ಮೂಲಾಜಿ ಇಲ್ಲದೆ ಬಡಪಾಯಿ ಗ್ರಾಹಕರಲ್ಲಿ ನೂರು ರೂಪಾಯಿಗಳಂತೆ ವಸೂಲಿ ಮಾಡುತ್ತಿದ್ದಾರೆ.
ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಬಂದು ವಿಚಾರಿಸಿದ್ದು, ಕಾಪು ತಹಶಿಲ್ದಾರ್ ಗಮನಕ್ಕೆ ತಂದಿದ್ದು ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ವ್ಯಕ್ತ ಪಡಿಸಿದ್ದಾರೆ. ಸೈಬರ್ ಮಾಲಿಕ ಇಮ್ತಿಯಾಜ್ ಮೊದಲಿಗೆ ತಾನು ಮಾಡಿದ ಅಪರಾಧವನ್ನು ಸಮರ್ಥಿಸಿಕೊಂಡಿದ್ದಾರೆ ಬಳಿಕ ಪೊಲೀಸರು ಮತ್ತು ತಹಶೀಲ್ದಾರ್ ಆಗಮಿಸಿದ್ದು, ಕಾನೂನು ಕ್ರಮದ ಎಚ್ಚರಿಕೆ ನೀಡುತ್ತಿದ್ದಂತೆ ದರ ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ.