ಕುಂದಾಪುರ: ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ

ಕುಂದಾಪುರ:ಬೈಂದೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ 4ನೇ ವರ್ಷದ ರಾಜ್ಯ ಮಟ್ಟದ 40 ಗಜಗಳ ಟೆನಿಸ್ ಬಾಲ್ ಕ್ರಿಕೆಟ್ ಹಗಲು ರಾತ್ರಿ ಪಂದ್ಯಾಟ ಬೈಂದೂರು ಟ್ರೋಫಿ-2024 ಗಾಂಧಿ ಮೈದಾನದಲ್ಲಿ ಅದ್ದೂರಿಯಾಗಿ ಶನಿವಾರ ನಡೆಯಿತು.

ಬೈಂದೂರು ಸ್ಪೋರ್ಟ್ಸ್ ಕ್ಲಬ್ ಅವರು ಆಯೋಜಿಸಿದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಪಾಂಚಜನ್ಯ ಕೋಟೇಶ್ವರ ಪ್ರಥಮ ಸ್ಥಾನವನ್ನು ಪಡೆಯಿತು,ಶೆಟ್ಟಿ ಎಂಪಿಯರ್ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿದೆ.ಪ್ರಥಮ ಬಹುಮಾನವಾಗಿ 1,00,006 ಹಾಗೂ ಟ್ರೋಫಿ,ದ್ವಿತೀಯ ಬಹುಮಾನವಾಗಿ 50,006 ಹಾಗೂ ಟ್ರೋಫಿಯನ್ನು ವಿಜೇತರಾದ ತಂಡದವರಿಗೆ ನೀಡಲಾಯಿತು.

ಬೈಂದೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿರಣ್ ಬೈಂದೂರು ಮಾತನಾಡಿ,ಬೈಂದೂರುನಲ್ಲಿ ನಡೆಯುತ್ತಿರುವುದು ಇದು 4ನೇ ವರ್ಷದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವಾಗಿದೆ.ಯುವಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇವೊಂದು ಕ್ರಿಕೆಟ್ ಪಂದ್ಯಾಟವನ್ನು ಆಯೋಜನೆ ಮಾಡಲಾಗಿದ್ದು ಹಲವಾರು ಯುವ ಪ್ರತಿಭೆಗಳಿಗೆ ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.5ನೇ ವರ್ಷದ ಕ್ರಿಕೆಟ್ ಪಂದ್ಯಾಟವನ್ನು ಮುಂದಿನ ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡುವ ಆಲೋಚನೆಯನ್ನು ಹೊಂದಿದ್ದು ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು.

ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ,ದೀಪಕ್ ಕುಮಾರ್ ಶೆಟ್ಟಿ,ಜಯಾನಂದ ಹೋಬಳಿದಾರ್,ದಿನೇಶ್ ಗಾಣಿಗ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಚರಣ್ ಬೈಂದೂರು,ಗೌರಿ ದೇವಾಡಿಗ,ಲಾವಣ್ಯ ಗಣೇಶ ಕಾರಂತ,ಬೈಂದೂರು ಗಾಂಧಿ ಮೈದಾನ ಹೋರಾಟ ಸಮಿತಿ ಮುಂಚೂಣಿ ನಾಯಕ ಬಿ.ಆರ್ ದೇವಾಡಿಗ ಅವರು ಆಗಮಿಸಿ ಪಂದ್ಯಾಟಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಬೈಂದೂರು ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ನಿತಿನ್ ದೇವಾಡಿಗ, ಗೌರವಾಧ್ಯಕ್ಷ ರಾಜೇಶ್ ಆಚಾರ್ಯ, ಗುರು ಪ್ರಸಾದ ದೇವಾಡಿಗ, ಜೊತೆ ಕಾರ್ಯದರ್ಶಿ ಮಹೇಶ್ ಆಚಾರ್ಯ, ಗುಂಡು ಬೈಂದೂರು, ನಿತಿರಾಜ್ ಬೈಂದೂರು, ವಿಘ್ನೇಶ ಮುನ್ನಾ, ರಾಘವೇಂದ್ರ ಪೂಜಾರಿ ಪಡುವರಿ ಮತ್ತಿತರರು ಉಪಸ್ಥಿತರಿದ್ದರು.
