ಕುಂದಾಪುರ: ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ 29ನೇ ವಾರ್ಷಿಕ ಮಹಾಸಭೆ
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ 29ನೇ ವಾರ್ಷಿಕ ಅಧಿವೇಶನ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ವಿಪ್ರ ಸನ್ಮಾನ, ವಿಚಾರಗೋಷ್ಠಿ ಕಾರ್ಯಕ್ರಮಗಳು ನಾಗೂರು ಒಡೆಯರ ಮಠ ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಶ್ರೀ ಕೃಷ್ಣಮೂರ್ತಿ ಮಂಜ ಅವರು ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ, ಬ್ರಾಹ್ಮಣರಲ್ಲಿ ಇರುವ ಸದ್ಗುಣಗಳು ಮತ್ತು ಪ್ರತಿಭೆ ಆಧಾರದ ಮೇಲೆಯೇ ಜೀವನವನ್ನು ತಾತ್ವಿಕತೆಯೊಂದಿಗೆ ನಡೆಸಬೇಕು. ವೇದ ಮತ್ತು ಉಪನಿಷತ್ ಗಳಲ್ಲಿ ಇರುವ ತತ್ವಗಳಂತೆ ನಾವೆಲ್ಲ ಸಮಾಜಕ್ಕೆ ಮಾದರಿ ಆಗಬೇಕು ಇನ್ನು ಕೂಡ ಬಡ ಮತ್ತು ದುರ್ಬಲ ಬ್ರಾಹ್ಮಣ ಕುಟುಂಬಗಳು ನಮ್ಮ ನಡುವೆ ಇದ್ದಾರೆ ಅವರಿಗೆ ಸಂಘಟನೆಗಳು ಸಹಾಯ ಮಾಡಬೇಕು ಎಂದು ಮಾರಣಕಟ್ಟೆ ಕೃಷ್ಣ ಮೂರ್ತಿ ಮಂಜ ಹೇಳಿದರು.
ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶುಭ ಕೋರಿದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಶ್ರೀ ಶುಭಚಂದ್ರ ಹತ್ವಾರ್ ಸಂಘಟನೆಯ ಮಹತ್ವ ವಿವರಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಶ್ರೀ ಕೃಷ್ಣಮೂರ್ತಿ ಮಂಜ, ಐಐಟಿ ಪಾಲಕ್ಕಾಡ್ ವಿಜ್ಞಾನಿ ಶ್ರೀ ಜಗದೀಶ್ ಬಾಯರಿ, ಪಿಚ್ ಡಿ ಪದವಿ ಪಡೆದ ಡಾ. ವೆಂಕಟರಾಮ್ ಭಟ್ ನೆಂಪು ನಿವೃತ್ತ ಸೈನಿಕ ಶ್ರೀ ಚಂದ್ರಶೇಖರ ನಾವಡ ಬೈಂದೂರು,
ಕಂಬಳ ಕೋಣಗಳ ಖ್ಯಾತಿಯ ಶ್ರೀ ಪರಮೇಶ್ವರ ಭಟ್ ಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಧಾರ್ಮಿಕ ಪ್ರವಚನವನ್ನು ಗೋಕರ್ಣದ ಶ್ರೀ ವಿಷ್ಣುಗುಪ್ತ ವಿದ್ಯಾಪೀಠದ ಸಂಶೋಧಕರಾದ ವಿದ್ವಾನ್ ಶ್ರೀ ಬಾಲಕೃಷ್ಣ ಭಟ್ ಕೆ ನಿರ್ವಹಿಸಿದರು.
ಸಾಂಸ್ಕೃತಿಕ ವೈಭವ, ವಧು ಅನ್ವೇಷಣೆಯ ಸವಾಲುಗಳು ಕುರಿತು ವಿಚಾರಗೋಷ್ಠಿ ಮತ್ತು ಸಂಘದ ಸದಸ್ಯರಿಗೆ ಹಗ್ಗ ಜಗ್ಗಾಟ ಸಂಗೀತ ಕುರ್ಚಿ ಏರ್ಪಡಿಸಲಾಯಿತು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀ ಸಂದೀಪ್ ಕುಮಾರ್ ಮಂಜ
ಕಾರ್ಯದರ್ಶಿ ಶ್ರೀ ರತ್ನಾಕರ ಉಡುಪ ಒಡೆಯರಾಮಠ, ಬಿಎಸ್ ಅನಂತ ಪದ್ಮನಾಭ ಬಾಯರಿ ಬೆಳ್ವೆ, ಖಜಾಂಚಿ ರಘುರಾಮ್ ಕುಂದಾಪುರ, ತಾಲೂಕು ಮಹಿಳಾಧ್ಯಕ್ಷೆ ಶ್ರೀಮತಿ ಸಂಧ್ಯಾ ಉಡುಪ ನಾಗೂರು ಒಡೆಯರಮಠ, ಅವನೀಶ ಹೊಳ್ಳ ಅಧ್ಯಕ್ಷರು ತಾಲೂಕು ಯುವ ವಿಪ್ರ ವೇದಿಕೆ, ಮತ್ತು ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಕುಂದಾಪುರ ಉಪಸ್ಥಿತರಿದ್ದರು.
ಅರುಣ್ ಶ್ಯಾನುಭಾಗ್ ಸ್ವಾಗತಿಸಿದರು. ಅಕ್ಷತಾ ಐತಾಳ್ ನಿರೂಪಿಸಿದರು, ಅವನಿಶ್ ಹೊಳ್ಳ ವಂದಿಸಿದರು.