3ನೇ ಬಾರಿಗೆ ತನ್ನ ದಾಖಲೆಯನ್ನು ತಾನೇ ಮುರಿದ ಸತೀಶ್ ಖಾರ್ವಿ
ಪವರ್ ಲಿಫ್ಟಿಂಗ್‍ನಲ್ಲಿ 3ನೇ ಬಾರಿಗೆ ತನ್ನ ದಾಖಲೆಯನ್ನು ತಾನೇ ಮುರಿದ ಹೆಗ್ಗಳಿಕೆ ಪಾತ್ರವಾಗಿರುವ ಅಂತರಾಷ್ಟ್ರೀಯ ಕ್ರೀಡಾಪಟು ಕುಂದಾಪುರ ಸತೀಶ್ ಖಾರ್ವಿ ನೂತನ ದಾಖಲೆ ಮಾಡಿರುವುದನ್ನು ಗುರುತಿಸಿ ಅವರಿಗೆ ಅದ್ದೂರಿ ಸ್ವಾಗತದ ಮೂಲಕ ಬೆಂಗಳೂರಿನಲ್ಲಿ ಕರ್ನಾಟಕ ಗೃಹ ಸಚಿವ ಮಾನ್ಯ ಡಾ.ಜಿ.ಪರಮೇಶ್ವರ್ ಅವರು ಗೌರವದಿಂದ ಅಭಿನಂದಿಸಿದರು.
ಸತೀಶ್ ಖಾರ್ವಿ ಅವರು ಮಂಗೋಲಿಯನಲ್ಲಿ ನಡೆಯುವ ಅಂತರಾಷ್ಟ್ರೀಯ ಓಲ್ಡ್ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಆಲ್ ಇಂಡಿಯಾ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಒ-1 66 ಕೆ.ಜಿ ವಿಭಾಗದಲ್ಲಿ 1 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕ ಪಡೆದಿರುವುದರೊಂದಿಗೆ 4ನೇ ಬಾರಿ ಆಲ್ ಇಂಡಿಯಾ ಚಾಂಪಿಯನ್ ಹಾಗೂ 4ನೇ ಆಲ್ ಇಂಡಿಯಾ ನೂತನ ಡೆಡ್ ಲಿಫ್ಟ್ ದಾಖಲೆಯೊಂದಿಗೆ 3ನೇ ಬಾರಿಗೆ ತನ್ನ ದಾಖಲೆಯನ್ನು ತಾನೇ ಮುರಿದ ಹೆಗ್ಗಳಿಕೆಗೆ ಸತೀಶ್ ಖಾರ್ವಿ ಅವರು ಪಾತ್ರರಾಗಿದ್ದಾರೆ.