ಬಂಟ್ವಾಳ: ಲಯನ್ಸ್ ಪ್ರಾಂತೀಯ ಸಮ್ಮಿಲನ ಆಮಂತ್ರಣ ಪತ್ರ ಬಿಡುಗಡೆ
ಬಂಟ್ವಾಳ: ಲಯನ್ಸ್ ಇಂಟರ್ ನ್ಯಾಶನಲ್ ಜಿಲ್ಲೆ 317 ಡಿ ಪ್ರಾಂತ್ಯ 5 ಇದರ ಪ್ರಾಂತೀಯ ಸಮ್ಮಿಲನ “ಸಂಧ್ಯಾ” ಫೆ. 11 ರಂದು ಇರಾ ಬಂಟರ ಭವನದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ನಡೆಯಿತು.
ಪ್ರಾಂತಿಯ ಸಮ್ಮಿಲನ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ. ಹಾಗೂ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಮಾತನಾಡಿ ಸಮ್ಮಿಲನದ ಯಶಸ್ಸಿಗೆ ಸಹಕಾರ ಕೋರಿದರು.
ಸಮ್ಮಿಲನ ಸಮಿತಿಯ ಗೌರವಾಧ್ಯಕ್ಷ ಡಾ. ಗೋಪಾಲ್ ಆಚಾರ್, ಗೌರವ ಮಾರ್ಗದರ್ಶಕರಾದ ವಸಂತ ಕುಮಾರ್ ಶೆಟ್ಟಿ, ಕೆ.ದೇವದಾಸ್ ಭಂಡಾರಿ, ಗೌರವ ಸಲಹೆಗಾರ ಮನೋರಂನ್ ಕೆ.ಆರ್., ಕಾರ್ಯದರ್ಶಿ ಜಯಪ್ರಕಾಶ್ ರೈ ಮೇರಾವು, ರಾಮ್ ಪ್ರಸಾದ್ ರೈ, ಪ್ರಾಂತಿಯ ಸಂಯೋಜಕ ವಿಜಯ ರೈ ಕೆ., ವಲಯಾಧ್ಯಕ್ಷ ರಾದ ಯುಜೀನ್ ಲೋಬೋ, ಡೊನಾಲ್ಡ್ ಬಂಟ್ವಾಳ್, ವಲಯ ಸಂಯೋಜಕ ಸತೀಶ್ ಭಂಡಾರಿ, ವಿವಿಧ ಸಮಿತಿಗಳ ಪ್ರಮುಖರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್, ರಾಮಣ್ಣ ಶೆಟ್ಟಿ, ಉಮಾನಾಥ ರೈ ಮೇರಾವು, ಬಾಲಕೃಷ್ಣ ಸೆರ್ಕಳ, ಕೆ. ಬಾಲಕೃಷ್ಣ ಶೆಟ್ಟಿ, ಸುಧಾಕರ ಆಚಾರ್ಯ, ಮಲ್ಲಿಕಾ ಭಂಡಾರಿ, ಪ್ರಶಾಂತ್ ಕೋಟ್ಯಾನ್, ರಮಾ ಜಿ. ಆಚಾರ್, ದೇವಿಕಾ ದಾಮೋದರ್, ಶಿವರಾಮ ರೈ ಎಂ. ಚಿತ್ತರಂಜನ್ ಕೆ.ಆರ್., ವಾಮಯ ಜೆ. ಕೋಟ್ಯಾನ್, ದೇವಪ್ಪ ಡಿ. ಪೂಜಾರಿ, ರಮೇಶ್ ಕುಲಾಲ್ ಪಣೋಲಿಬೈಲು, ಅರುಣ್ ಡಿಕುನ್ಹ, ಕೆ. ಪುಷ್ಪರಾಜ ಶೆಟ್ಟಿ, ಜಗನ್ನಾಥ ರೈ ಎಂ., ರವೀಂದ್ರ ಕುಕ್ಕಾಜೆ, ಪದ್ಮಾ ಐತಾಳ್ ಮತ್ತಿತರರು ಭಾಗವಹಿಸಿದ್ದರು.