ಮೀನು ಸಾಗಾಟ ವಾಹನಕ್ಕೆ ಲಾರಿ ಡಿಕ್ಕಿ – ಆಂಧ್ರದಲ್ಲಿ ಉಚ್ಚಿಲದ ಯುವಕ ಬಲಿ

ಮಂಗಳೂರಿನಿಂದ ಆಂಧ್ರ ಪ್ರದೇಶಕ್ಕೆ ಮೀನು ಹೇರಿಕೊಂಡು ಹೋಗಿದ್ದ ವಾಹನ ಹಾಗೂ ಲಾರಿ ಮಧ್ಯೆ ಆಂಧ್ರ ನಾಬೂರ ಎಂಬಲ್ಲಿ ಅಪಘಾತ ನಡೆದಿದೆ. ಮೀನು ಸಾಗಾಟ ವಾಹನ ಚಾಲಕ ಉಚ್ಚಿಲದ ಯುವಕ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೀನು ಸಾಗಾಟ ವಾಹನ ಚಾಲಕ ಕಾಪು ತಾಲೂಕಿನ ಉಚ್ಚಿಲ ಭಾಸ್ಕರ ನಗರ ಬಾಂಗ್ಲಾ ನಿವಾಸಿ ಬಶೀರ್ ಎಂದು ತಿಳಿದು ಬಂದಿದೆ. ಇಂದು ಮುಂಜಾನೆ ವೇಳೆ ಅಪಘಾತ ಸಂಭವಿಸಿದ್ದು, ಕಾಲು ಸಿಲುಕಿಕೊಂಡ ಪರಿಣಾಮ ಅವರನ್ನು ಹೊರ ತೆಗೆಯಲು ಪೊಲೀಸರೊಂದಿಗೆ ಸಾರ್ವಜನಿಕರು ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿದ್ದಾರೆ ಎನ್ನಲಾಗಿದೆ. ಅಪಘಾತದ ಸುದ್ಧಿ ತಿಳಿದ ತಕ್ಷಣ ಸಂಬಂಧಿಕರು ಘಟನಾ ಪ್ರದೇಶಕ್ಕೆ ತೆರಳಿದ್ದಾರೆ. ವಿವಾಹಿತನಾಗಿದ್ದ ಇವರು ಪತ್ನಿ ಹಾಗೂ ಎರಡು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.
