ಓಡುವ ರೈಲಿನಲ್ಲಿ ನಡೆದ ಅತ್ಯಾಚಾರ : ಆರೋಪಿ ಸೆರೆ
ಮಧ್ಯ ಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಓಡುತ್ತಿರುವ ರೈಲಿನಲ್ಲಿ 30ರ ಮಹಿಳೆಯ ಅತ್ಯಾಚಾರ ನಡೆದಿದ್ದು, ಆರೋಪಿಯನ್ನು ಸಿಆರ್‍ಪಿ ಪಡೆಯವರು ಬಂಧಿಸಿ ಸಾತ್ನಾ ಪೆÇೀಲೀಸರಿಗೆ ಒಪ್ಪಿಸಿದರು.
ಬಂಧಿತ ಆರೋಪಿ ಉತ್ತರ ಪ್ರದೇಶ ಮೂಲದ ಸದ್ಯ ಕಟ್ನಿ ನಿವಾಸಿ ಆಗಿರುವ 23ರ ಪಂಕಜ್ ಕುಶ್ವಾಹ. ಮೂತ್ರಾಲಯದ ಬಳಿ ಈ ಅತ್ಯಾಚಾರ ನಡೆದಿದೆ. ಸಾತ್ನಾದಲ್ಲಿ ರೈಲು ನಿಲ್ಲುತ್ತಲೇ ಮಹಿಳೆ ಕಂಡ ಸಿಆರ್‍ಪಿ ಪೇದೆಗಳನ್ನು ಕೂಗಿ ಕರೆದು ಆರೋಪಿಯನ್ನು ತೋರಿಸಿದ್ದಾಳೆ. ಓಡತೊಡಗಿದ ಅತ್ಯಾಚಾರಿಯನ್ನು ಅವರು ಸೆರೆ ಹಿಡಿದರು.