ಮಲ್ಪೆಯ ಮೀನು ಬೋಟು ಭಟ್ಕಳ ಕಡಲಲ್ಲಿ ಲೂಟ : ಏಳು ಆರೋಪಿಗಳ ಬಂಧನ
ಮಲ್ಪೆ ಬಂದರಿನಿಂದ ಮೀನು ಹಿಡಿಯಲು ಹೋಗಿದ್ದ ಕೃಷ್ಣನಂದನ ಎಂಬ ಬೋಟಿನಿಂದ ಮೀನು ಮತ್ತು ಡೀಸೆಲ್ ಅಪಹರಿಸಿದ್ದಾರೆ ಎಂಬ ದೂರಿನ ಮೇಲೆ ಮಲ್ಪೆ ಪೋಲೀಸರು ಭಟ್ಕಳದಲ್ಲಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ಭಟ್ಕಳದ ೩೪ರ ಸುಬ್ರಮಣ್ಯ ಖಾರ್ವಿ, 38ರ ರಾಘವೇಂದ್ರ ಖಾರ್ವಿ, 40ರ ಹರೀಶ್ ನಾರಾಯಣ ಖಾರ್ವಿ, 42ರ ನಾಗೇಶ್ ನಾರಾಯಣ ಖಾರ್ವಿ, 38ರ ಗೋಪಾಲ ಮಾಧವ, 43ರ ಸಂತೋಷ ದೇವಯ್ಯ, 50ರ ಲಕ್ಷ್ಮಣ್ ಬಂಧಿತ ಆರೋಪಿಗಳು.
8 ಲಕ್ಷ ಮೌಲ್ಯದ ಮೀನು ಮತ್ತು ಐದೂವರೆ ಲಕ್ಷ ಮೌಲ್ಯದ ಡೀಸೆಲ್ ದರೋಡೆ ಎಂದು ಚೇತನ ಸಾಲ್ಯಾನ್ ದೂರು ನೀಡಿದ್ದರು. ಅವರು ನಮ್ಮ ಪ್ರದೇಶದಲ್ಲಿ ಬಂದು ಮೀನು ಹಿಡಿದು ಓಡುತ್ತಿದ್ದರು. ಅದಕ್ಕೆ ಈ ಬಾರಿ ಕಿತ್ತುಕೊಂಡೆವು ಎಂದು ಆರೋಪಿಗಳು ಹೇಳಿದ್ದಾರೆ.