ಕಂಬಳ ಕ್ಷೇತ್ರದ ಸಾಧಕ ಬಾಡಪೂಜರಿ ಇನ್ನಿಲ್ಲ
ಮಂಗಳೂರು ಕಂಬಳ ಕ್ಷೇತ್ರದ ಸಾಧಕ ಯಜಮಾನ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಡಬಿದ್ರೆಯ ಇರುವೈಲ್ ಪಾಣಿಲ ಬಾಡಪೂಜಾರಿ ವಯೋಸಹಜ ಕಾಯಿಲೆಯಿಂದ ಇಂದು ಮುಂಜಾನೆ ನಿಧನರಾದರು. ಕಂಬಳ ಕ್ಷೇತ್ರದಲ್ಲಿ ಇವರ ಯಜಮಾನ ನೇತೃತ್ವದಲ್ಲಿ ಕೋಣಗಳು ವಿಶೇಷ ಸಾಧನೆ ಮಾಡಿದ್ದು, ಇವರ ಯಜಾಮಾನಿಕೆಯಲ್ಲಿ ಕಂಬಳದ ಉಸೇನ್ ಬೋಲ್ಟ್, ಖ್ಯಾತಿಯ ಅಶ್ವಥುರ ಶ್ರೀನಿವಾಸ ಗೌಡ ಕಂಬಳದಲ್ಲಿ ವಿಶ್ವದಾಖಲೆ ಮಾಡಿದ್ದರು. ಇರುವೈಲ್ ಪಾಣಿಲ ಬಾಡವೂಜಾರಿ ಪ್ರಗತಿಪರ ಕೃಷಿಕರಾಗಿದ್ದು, 23 ವರ್ಷ ಕಂಬಳ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು ಇವರ ತಾಟೆ ಮತ್ತು ಬೊಟ್ಟೆಮಾರ್ ಕೋಣಗಳು ಕಂಬಳ ಕ್ಷೇತ್ರದ ಅಪಾರ ಅಭಿಮಾನಿಯನ್ನು ಹೊಂದಿದೆ ಮಾತ್ರವಲ್ಲ ಕಂಬಳ ಕ್ಷೇತ್ರದಲ್ಲಿ ಇವರ ಕೋಣಗಳು ಅನೇಕ ಪದಕಗಳನ್ನು ಹಾಗೂ ದಾಖಲೆಗಳನ್ನು ನಿರ್ಮಿಸಿದವು. ವಯೋವೃದ್ಯ ಆಗಿದ್ದರೂ ತನ್ನ ಜೀವನದ ಅಂತ್ಯಕಾಲದವರೆಗೂ ಕಂಬಳದ ಕ್ರೀಡೆಗಳಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಇದೀಗ ಕಂಬಳ ಕ್ಷೇತ್ರವುದ ಅಜಾತಶತ್ರುವಿನ ವಿಧಾನಕ್ಕೆ ಕಂಬಳ ಅಭಿಮಾನಿಗಳು ಕಂಬನಿ ಮಿಡಿದಿದ್ದಾರ