ಮಂಗಳೂರು: ಇಂದು ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್‌ನಿಂದ ಸ್ವರ ಶ್ರದ್ಧಾಂಜಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ನಗರದ ಉರ್ವಸ್ಟೋರ್ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕರ್ನಾಟಕ ಸರಕಾರ ಸಹಯೋಗದೊಂದಿಗೆ ಸ್ವರ ಶ್ರದ್ಧಾಂಜಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಫೆ.೧೦ರಂದು ಸಂಜೆ ೫ ಗಂಟೆಗೆ ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.
ಇತ್ತೀಚೆಗೆ ನಿಧನಹೊಂದಿದ ಹಿಂದೂಸ್ತಾನಿ ಸಂಗೀತ ದಿಗ್ಗಜರಾದ ಪ್ರಭಾ ಅತ್ರೆ,ಪಮಡಿತ್ ರಶೀದ್ ಖಾನ್ ಪಂಡಿತ್ ಕೇದಾರ್ ಬೋಡಸ್ ಅವರ ಸ್ಮರಣಾರ್ಥವಾಗಿ ಹಿಂದೂಸ್ತಾತಿ ಶಾಸ್ತ್ರೀಯ ಸಂಗೀತ ಕಚೇರಿ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರ ಶಿಷ್ಯ ಪಂಡಿತ್ ಸತೀಶ್ ಭಟ್ ಮಾಳಕೊಪ್ಪ ಹಾಗೂ ಪಂಡಿತ್ ಶ್ರೀಪಾದ ಹೆಗಡೆ ಕಂಪ್ಲಿ ಅವರ ಶಿಷ್ಯ ಬೆಂಗಳೂರಿನ ರಘುನಂದನ್ ಭಟ್ ಅವರು ಕಚೇರಿ ನಡೆಸುವರು. ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್ ಮತ್ತು ತಬಲಾದಲ್ಲಿ ಭಾರವಿ ದೇರಾಜೆ ಸಹಕರಿಸಲಿದ್ದಾರೆ. ಸಂಗೀತಾಸಕ್ತರಿಗೆ ಮುಕ್ತ ಪ್ರವೇಶ ನೀಡಲಾಗಿದೆ.

Related Posts

Leave a Reply

Your email address will not be published.