ಮಂಗಳೂರು ವಿವಿ ಮಾಜಿ ಉಪಕುಲಪತಿ ಪ್ರೊ.ಕೆ. ಭೈರಪ್ಪ ನಿಧನ
ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ..ಕೆ.ಭೈರಪ್ಪ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.
2014 ಜೂನ್ ನಿಂದ 2019 ಜೂನ್ ವರೆಗೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕುಲಪತಿಗಳಾಗಿ ಕಾರ್ಯನಿರ್ವಹಿಸಿ ಬಳಿಕ ನಿವೃತ್ತಿ ಹೊಂದಿದ್ದರು ಆ ಬಳಿಕ ಆದಿ ಚುಂಚನಗಿರಿಯಲ್ಲಿ ಸಹ ಕುಲಪತಿಗಳಾಗಿ ಕಾರ್ಯನಿರ್ವ ಹಿಸುತಿದ್ದರು.
ಅವರು ಮೆಟೀರಿಯಲ್ಸ್ ಸೈನ್ಸ್, ನ್ಯಾನೊಟೆಕ್ನಾಲಜಿ, ಸಾಲಿಡ್ ಸ್ಟೇಟ್ ಸೈನ್ಸ್, ಕ್ರಿಸ್ಟಲ್ ಗ್ರೋತ್, ಕೆಮಿಸ್ಟ್ರಿ ಆಫ್ ಮೆಟೀರಿಯಲ್ಸ್, ಸ್ಫಟಿಕಶಾಸ್ತ್ರ, ಕ್ರಿಸ್ಟಲ್ ಕೆಮಿಸ್ಟ್ರಿ, ಪ್ರಾಯೋಗಿಕ ಖನಿಜಶಾಸ್ತ್ರ ಮತ್ತು ಪರಿಸರ ವಿಜ್ಞಾನದಲ್ಲಿ ಪರಿಣತಿ ಹೊಂದಿದ್ದರು.ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ತೀವ್ರ ಹೃದಯಾಘಾತಗೊಂಡು ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.