ಮಂಗಲ್ಪಾಡಿ: ಮುಸ್ಲಿಂ ಲೀಗ್ ಆಡಳಿತ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಪ್ರತಿಭಟನೆ
ಮುಸ್ಲಿಂ ಲೀಗ್ ಆಡಳಿತ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಭಾರತೀಯ ಜನತಾ ಪಕ್ಷ ಮಂಗಲ್ಪಾಡಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಮಂಗಲ್ಪಾಡಿ ಪಂಚಾಯತ್ ಕಚೇರಿಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಅವರು ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮುಸ್ಲಿಂ ಲೀಗ್ ಆಡಳಿತದ ವೈಫಲ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯತು ಸಮಿತಿ ಅಧ್ಯಕ್ಷರಾದ ರಾಮಚಂದ್ರ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಸುಧಾಮ ಗೊಸಾಡ್, ಕುಂಬಳ ಅಧ್ಯಕ್ಷರಾದ ಸುನಿಲ್ ಕುಮಾರ್ ಅನಂತಪುರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಕುಮಾರ್ ಮಯ್ಯ,ಅನಿಲ್ ಕುಮಾರ್ ಕೆ ಪಿ, ಜಿಲ್ಲಾ ಸಮಿತಿ ಸದಸ್ಯರಾದ ಬಾಬು ಕುಬನೂರ್, ಜಯಂತಿ ಶೆಟ್ಟಿ, ನೇತಾರರಾದ ಭರತ್ ರೈ, ಸೀತಾರಾಮ ಭಂಡಾರಿ, ರಘು ಸಿ, ಭಾಲಕೃಷ್ಣ ಆಂಬಾರ್, ಸ್ವಾಗತ್ ಕುಮಾರ್, ಹರಿನಾತ ಭಂಡಾರಿ ಸುರೇಶ್ ಮುಟ್ಟ ಸುರೇಶ ಹೇರೂರ್, ಭಾಗೀರಥಿ ಇಚ್ಲಂಗೊಡು ಅನಿಲ್ ಐಲ ಗಣೇಶ್ ಕೆ ಯನ್, ,ಪಂಚಾಯತು ಸದಸ್ಯರಾದ ಸುಧಾ. ವಿವಿ,ರೇವತಿ ಕೆ,ಯುವಮೋರ್ಚಾ ನೇತಾರರಾದ ಕಿಶೋರ್ ಭಗವತಿ ಯುವಮೋರ್ಚಾ ಪಂಚಾಯತು ಸಮಿತಿ ಅಧ್ಯಕ್ಷರಾದ ಉಣ್ಣಿ ಪ್ರತಾಪನಗರ ಮತ್ತು ಹಲವಾರು ನೇತಾರರು ಕಾರ್ಯಕರ್ತರುಭಾಗವಹಿಸಿದರು ,ಪಂಚಾಯತು ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಸ್ವಾಗತಿಸಿ ಯುವಮೋರ್ಚಾ ನೇತಾರರಾದ ಅಮಿತ್ ಪರಂಕಿಲ ವಂದಿಸಿದರು