ಮಂಗಳೂರಿನಲ್ಲಿ `ಕ್ರಿಸ್ತ ಜಯಂತಿ ಜುಬಿಲಿ ಸಂಭ್ರಮಾಚರಣೆ

ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥ `ಕ್ರಿಸ್ತ ಜಯಂತಿ ಜುಬಿಲಿ2025′ ಸಂಭ್ರಮಾಚರಣೆಯ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಮಂಗಳೂರಿನ ರೋಮನ್ ಕೆಥೊಲಿಕ್ ಧರ್ಮಕ್ಷೇತ್ರದಲ್ಲೂ ಎರಡು ವರ್ಷಗಳ ಪೂರ್ವ ತಯಾರಿಗಳಿಗೆ ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ ಚಾಲನೆ ನೀಡಿದರು.

ನಗರದ ಹೋಲಿ ರೋಜರಿ ಕೆಥೆಡ್ರಲ್‍ನಲ್ಲಿ `ಭರವಸೆಯ ಯಾತ್ರಿಕರು’ ಎಂಬ ಧ್ಯೇಯವನ್ನು ಒಳಗೊಂಡ ಜುಬಿಲಿ ಲಾಂಛನದ ಅನಾವರಣದೊಂದಿಗೆ ಪೂರ್ವ ಸಿದ್ಧತೆಗಳಿಗೆ ಚಾಲನೆ ನೀಡಲಾಯಿತು. ಬಿಷಪ್ ವಂ. ಪೀಟರ್ ಪೌಲ್ ಸಲ್ಡಾನ, ಕ್ರಿಸ್ತ ಜಯಂತ್ಯುತ್ಸವಕ್ಕೆ ಸಮರ್ಪಿತವಾದ ಪ್ರಾರ್ಥನೆಯನ್ನು ಯಾಜಕರು ಹಾಗೂ ಅಲ್ಲಿ ಸೇರಿದ್ದ ಭಕ್ತರ ಜತೆ ಪಠಿಸಿದರು.
ನಂತರ ಜುಬಿಲಿ ಗೀತೆಯನ್ನು ಹಾಡಲಾಯಿತು.ಉದ್ಘಾಟನಾ ಸಮಾರಂದಲ್ಲಿ ಕೆಥೆಡ್ರಲ್ ನ ರೆಕ್ಟರ್ ವಂ.ಆಲ್ಫ್ರೆಡ್ ಜೆ. ಪಿಂಟೊ, ವಂ.ವಿನೋದ್ ಲೋಬೊ, ವಂ. ಸಂತೋಷ್ ಡಿಸೋಜ, ವಂ. ಹ್ಯಾರಿ ಡಿಸೋಜ, ವಂ. ತ್ರಿಶಾನ್ ಡಿಸೋಜ, ಡಾ.ಜಾನ್ ಡಿಸಿಲ್ವ ಉಪಸ್ಥಿತರಿದ್ದರು.
