ಬಿಸಿಸಿಐ ವತಿಯಿಂದ `ಹೊಟೇಲ್ ತಾಜ್ ವಿವಾಂತದಲ್ಲಿ ಇಫ್ತಾರ್ ಕೂಟ
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಮಂಗಳೂರು ಇದರ ವತಿಯಿಂದ ಇಫ್ತಾರ್ ಕೂಟವು ನಗರದ ಹೊಟೇಲ್ ತಾಜ್ ವಿವಾಂತ' ಹೊಟೇಲ್ ನಲ್ಲಿ ನಡೆಯಿತು. ಈ ಸಂದರ್ಭ ರಮಝಾನ್ ತಿಂಗಳು ಮತ್ತು ಝಕಾತ್ ವಿಚಾರವಾಗಿ ಕಚ್ಚಿ ಮೆಮನ್ ಮಸ್ಜಿದ್‍ನ ಖತೀಬ್ ವೌಲಾನ ಶುಹೈಬ್ ನದ್ವಿ ವಿಶೇಷ ಉಪನ್ಯಾಸ ನೀಡಿದರು.
ರಮಝಾನ್ ಅಲ್ಲಾಹನ ಉಡುಗೊರೆಯಾಗಿದೆ.
ಸೀಮಿತ ಅವಧಿಯಲ್ಲಿ ನೂರಾರು ಪಟ್ಟು ಪುಣ್ಯ ಸಂಪಾದಿಸುವ ಈ ತಿಂಗಳ ಮಹತ್ವವನ್ನು ಪ್ರತಿಯೊಬ್ಬ ಮುಸಲ್ಮಾನ ತಿಳಿದುಕೊಳ್ಳಬೇಕಿದೆ ಎಂದರು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ಯ ಇಂಡಸ್ಟ್ರಿ (ಬಿಸಿಸಿಐ) ಕೇಂದ್ರ ಸಮಿತಿಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಯೆನೆಪೆÇಯ ವಿವಿಯ ಕುಲಾಧಿಪತಿ ಯೆನೆಪೆÇಯ ಅಬ್ದುಲಾ ಕುಂಞ ಕಣ್ಣೂರು ವಿವಿಯ ಮಾಜಿ ಕುಲಪತಿ .ಡಾ. ಎಂ.ಅಬ್ದುಲ್ ರಹ್ಮಾನ್, ಮಾಜಿ ಶಾಸಕ ಮೊಯ್ದಿನ್ ಬಾವಾ ಮತ್ತಿತರರು ಉಪಸ್ಥಿತರಿದ್ದರು.