ಮಂಗಳೂರು: ಶ್ರೀ ಭ್ರಾಮರಿ ಹುಲಿ ತಂಡದ ಊದು ಇಡುವ ಕಾರ್ಯಕ್ರಮ
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ದಸರಾ ಮಹೋತ್ಸವ ಶಾರದಾ ಮಾತೆಯ ಶೋಭಾ ಯಾತ್ರೆಯ ಸಲುವಾಗಿ ಕೂಳೂರಿನ ಟೀಮ್ ಡ್ಯಾಜ್ಲರ್ ಟೈಗರ್ಸ್ 1ನೇ ವರ್ಷದ ಸಂಭ್ರಮದಲ್ಲಿ ಶ್ರೀ ಭ್ರಾಮರಿ ಹುಲಿ ಇದರ ಊದು ಇಡುವ ಕಾರ್ಯಕ್ರಮವು ಅಕ್ಟೋಬರ್ 23ರಂದು ಸಂಜೆ 4.30ಕ್ಕೆ ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯಲಿದೆ.
ಕರಾವಳಿಯೇ ಸಂಭ್ರಮಪಡುವ ಜಗತ್ತಿನ ಕಣ್ಮನ ಸೆಳೆಯುವ ಅತ್ಯಾಕರ್ಷಕ ಹಾಗೂ ಲಕ್ಷಾಂತರ ಜನ ಸಮ್ಮಿಲನದ ಮಂಗಳೂರು ದಸರಾವು ವಿಜೃಂಭಣೆಯಿಂದ ನಡೆಯುತ್ತಿದೆ. ನವರಾತ್ರಿ ಬಂತೆಂದರೆ ಸಾಕು ಕರಾವಳಿಯಲ್ಲಿ ಹುಲಿ ವೇಷ ಕುಣಿತ ಗಮನ ಸೆಳೆಯುತ್ತದೆ. 9 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲೂ ಹುಲಿ ವೇಷದ ನರ್ತನಗಳು ಹಬ್ಬಕ್ಕೆ ಮೆರಗು ನೀಡುತ್ತದೆ.
ಅಂತೆಯೇ ದಸರಾ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ದಸರಾ ಮಹೋತ್ಸವ ಶಾರದಾ ಮಾತೆಯ ಶೋಭಾ ಯಾತ್ರೆಯ ಸಲುವಾಗಿ 1ನೇ ವರ್ಷದ ಸಂಭ್ರಮದ ಶ್ರೀ ಭ್ರಾಮರಿ ಹುಲಿವೇಷದ ಊದು ಇಡುವ ಕಾರ್ಯಕ್ರಮವು ಅ.23ರಂದು ಸಂಜೆ 4.30ಕ್ಕೆ ಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಹುಲಿವೇಷದ ಟ್ಯಾಬ್ಲೋಗೆ ತನು-ಮನ-ಧನಗಳಿಂದ ಸಹಕರಿಸುವಂತೆ ಟೀಮ್ ಡ್ಯಾಜ್ಲರ್ ಟೈಗರ್ಸ್‍ನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.