ಮಂಗಳೂರು: ಮತದಾರರ ಪಟ್ಟಿ ಪರಿಷ್ಕೃತ ಕರಡು ಪ್ರತಿ ಬಿಡುಗಡೆ: ಡಿ.9ರ ವರೆಗೆ ಹಕ್ಕು-ಆಕ್ಷೇಪಣೆಗೆ ಅವಕಾಶ

ಮಂಗಳೂರು: ಭಾರತೀಯ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕೃತ ಕರಡು ಪ್ರತಿ ಬಿಡುಗಡೆ ಮಾಡಿದೆ. ಡಿಸೆಂಬರ್ 09ರ ವರೆಗೆ ಹಕ್ಕು – ಆಕ್ಷೇಪಣೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಮತದಾರರ ಪಟ್ಟಿಗೆ ವಿಶೇಷ ನೋಂದಣಿ ಅಭಿಯಾನಕ್ಕೆ ಎರಡು ಶನಿವಾರ ಮತ್ತು ಎರಡು ಭಾನುವಾರ ದಿನ ನಿಗದಿ ಪಡಿಸಿದೆ.

ನವೆಂಬರ್ 18 ಮತ್ತು19, ಡಿಸೆಂಬರ್ 2 ಮತ್ತು 3 ವಿಶೇಷ ಮತದಾರರ ನೊಂದಣಿ ನಡೆಯಲಿದೆ. ಎಂಟು ವಿಧಾನ ಸಭಾ ಕ್ಷೇತ್ರಗಳಿಗೆ ಮತದಾರರ ನೋಂದಣಾಧಿಕಾರಿ, ಸಹಾಯಕ ಅಧಿಕಾರಿಗಳ ನೇಮಕ ಆಗಿದೆ. 2024 ರ ಮತದಾರರ ಕರಡು ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 1785835 ಮತದಾರರ ಸಂಖ್ಯೆ ಇದೆ. ಈ ಪೈಕಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ,

77 ತೃತೀಯ ಲಿಂಗೀಯ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1876 ಮತ ಕೇಂದ್ರಗಳಿವೆ. ಈ ಪೈಕಿ ಬೆಳ್ತಂಗಡಿ ಕ್ಷೇತ್ರದಲ್ಲಿ 229429 ಮತದಾರರಿದ್ದು, ಮೂಡಬಿದಿರೆ 206111, ಮಂಗಳೂರು ಉತ್ತರ 250590, ಮಂಗಳೂರು ದಕ್ಷಿಣ 246665, ಮಂಗಳೂರು ಕ್ಷೇತ್ರದಲ್ಲಿ 205759, ಬಂಟ್ವಾಳ 227685, ಪುತ್ತೂರು 212892, ಸುಳ್ಯ 206704 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

Related Posts

Leave a Reply

Your email address will not be published.