ಮಣಿಪಾಲದಲ್ಲಿ ವಿಸ್ಡಮ್ ಎಡ್ ನೂತನ ಶಾಖೆ ಕಾರ್ಯಾರಂಭ
ಉಡುಪಿಯ ಮಣಿಪಾಲದಲ್ಲಿ ವಿಸ್ಡಮ್ ಎಡ್ ಇದರ ನೂತನ ಶಾಖೆಯು ಕಾರ್ಯಾರಂಭಗೊಂಡಿತು. ಉಡುಪಿ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅವರು ನೂತನ ಶಾಖೆ ಉದ್ಘಾಟಿಸಿದರು.
ಈ ಸಂದರ್ಭ ಉಜ್ವಲ್ ಕನ್ಸ್ಟ್ರಕ್ಷನ್ಸ್ ಇದರ ಮಾಲಿಕರಾದ ಪುರುಷೋತ್ತಮ್ .ಪಿ ಶೆಟ್ಟಿ, ಕಾಂಚಾಣ ಹುಂಡೈ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಸಾದ್ ರಾಜ್ ಕಾಂಚನ್, ಉಡುಪಿ ಜಿಲ್ಲೆಯ ನಿವೃತ ಡಿಡಿಪಿಐ ಎಸ್ .ಸದಾನಂದ ಶೆಟ್ಟಿಗಾರ್, ಕೌನ್ಸಿಲಿಂಗ್ ಮತ್ತು ಸೈಕೋಥೆರಪಿಯ ತರಬೇತುದಾರರಾಗಿ ವಿಸ್ಡಮ್ ಎಡ್ ಸಂಸ್ಥೆಯ ಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾದ ಡಾ.ಫ್ರಾನ್ಸಿಸ್ಟ ತೇಜ್, ಕೆರಿಯರ್ ಕೌನ್ಸಿಲಿಂಗ್‌ನ ತರಬೇತುದಾರರಾಗಿ ಸಂಸ್ಥೆಯ ಸಿಎಒ ಡಾ. ಗುರು ತೇಜ್ ಉಪಸ್ಥಿತರಿದ್ದರು.