ಮಂಜೇಶ್ವರ: ಎಟಿಎಂಗೆ ಹಣ ತುಂಬಿಸಲು ಬಂದ ವಾಹನದಿಂದ ದರೋಡೆ
ಮಂಜೇಶ್ವರ : ಎಟಿಎಂಗೆ ಹಣ ತುಂಬಿಸಲು ಬಂದ ವಾಹನದ ಗಾಜು ಪುಡಿಗೈದು ೫೦ಲಕ್ಷ ರೂ. ದರೋಡೆಗೈದು ತಂಡ ಪರಾರಿಯಾದ ಘಟನೆ ಉಪ್ಪಳದಲ್ಲಿ ನಡೆದಿದೆ.
ವಾಹನದ ಗಾಜು ಒಡೆದು ಹಣವಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡು ತಂಡ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ಉಪ್ಪಳದಲ್ಲಿ ಈ ಘಟನೆ ನಡೆದಿದೆ. ಎಟಿಎಂನಲ್ಲಿ ಹಣ ತುಂಬುತ್ತಿದ್ದಾಗ ಖಾಸಗಿ ಕಂಪನಿಯ ವಾಹನದಲ್ಲಿ ಕಳ್ಳತನ ನಡೆದಿದೆ.
ಸ್ಥಳಕ್ಕಾಗಮಿಸಿದ ಉಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.