Manjeshwara : ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಮಂಜೇಶ್ವರ ರಾಗಂ ಜಂಕ್ಷನ್ ಸಮೀಪದ ಕುನ್ನಿಲ್ ಜುಮಾ ಮಸೀದಿ ರಸ್ತೆ ಸಮೀಪದಲ್ಲಿ ವಾಸವಾಗಿರುವ ದಿವಂಗತ ಸಯ್ಯದ್ ಹಾದಿ ತಂಘಲ್ ರವರ ಪುತ್ರ ಹಮೀದ್ ತಂಘಲ್ ಎಂಬವರ ಮನೆಗೆ ಹಿಂಬಾಗದ ಬಾಗಿಲನ್ನು ಮುರಿದು ನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟನ್ನು ಮುರಿದು 60 ಪವನ್ ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದನ್ನು ಕಳವುಗೈದಿದ್ದಾರೆ.
ಹಮೀದ್ ತಂಘಲ್ ರವರು ಎರಡು ದಿವಸಕ್ಕೆ ಮೊದಲು ಕುಟುಂಬ ಸಮೇತರಾಗಿ ಏರ್ವಾಡಿಗೆ ತೆರಳಿದ್ದಾರೆನ್ನಲಾಗಿದೆ.
ಗುರುವಾರ ಸಂಜೆ ಮರಳಿ ಬಂದಾಗ ಮನೆಯ ಹಿಂಬಾಗದ ಬಾಗಿಲು ತೆರೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಒಳಗೆ ಹೋಗಿ ನೋಡಿದಾಗ ಆಭರಣ ಹಾಗೂ ನಗದು ಕಳವಾಗಿರುವುದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಮಂಜೇಶ್ವರ ಎಸ್ಸೈ ಅನ್ಸಾರ್ ನೇತೃತ್ವದ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಹಾಗೂ ಶ್ವಾನಧಳ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಕಳ್ಳರ ಬಗ್ಗೆ ಮಹತ್ವದ ಸುಳಿವು ಲಭಿಸಿರುವುದಾಗಿ ಪೊಲೀಸರಿಂದ ಮಾಹಿತಿ ಲಭಿಸಿದೆ.