ಮಂಜೇಶ್ವರ : ಪಿಎಫ್‍ಐ ಮುಖಂಡರ ಬಂಧನ ವಿರೋಧಿಸಿ ಪ್ರತಿಭಟನೆ

ಮಂಜೇಶ್ವರ: ಪಾಪ್ಯುಲರ್ ಫ್ರಂಟ್ ಮುಖಂಡರ ಬಂಧನವನ್ನು ವಿರೋಧಿಸಿ ರಾಜ್ಯ ವ್ಯಾಪಕವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರೆ ನೀಡಿರುವ ಪ್ರತಿಭಟನೆಯ ಭಾಗವಾಗಿ ಮಂಜೇಶ್ವರ ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.

ಮಂಜೇಶ್ವರ ಭಾಗದಲ್ಲಿ ಹರತಾಳ ಬೆಂಬಲಿಗರ ಮನವಿ ಮೇರೆಗೆ ಬಹುತೇಕ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಸಹಕರಿಸಿದ್ದಾರೆ. ಅತ್ಯವಶ್ಯಕ ಕೆಲವೊಂದು ವಾಹನಗಳು ರಸ್ತೆಗಿಳಿಯುವುದನ್ನು ಹೊರತು ಪಡಿಸಿದರೆ ಖಾಸಗಿ ಅಥವಾ ಸರಕಾರಿ ಬಸ್ಸುಗಳು ಸಂಚಾರವನ್ನು ನಡೆಸಿಲ್ಲ.ಸರಕಾರಿ ಕಚೇರಿಗಳಲ್ಲಿ ಕೂಡಾ ಸಿಬ್ಬಂದಿಗಳು ಆಗಮಿಸದೆ ಯಾವುದೇ ಕಾರ್ಯಗಳು ನಡೆದಿಲ್ಲ. ಕರ್ನಾಟಕಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಬಸ್ಸು ಲಭಿಸದೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಉಪ್ಪಳ ಮತ್ತು ಕುಂಜತ್ತೂರಿನಲ್ಲಿ ಹರತಾಳ ಬೆಂಬಲಿಗರಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಮಂಜೇಶ್ವರದಲ್ಲಿ ಶಾಂತಿಯುತ ಪ್ರತಿಭಟನೆ ನಡೆದಿದೆ.
