ಮಕ್ಸೂದ್ ಕೈಚಳಕದಿಂದ ಮೂಡಿಬಂದ ವಿವಿಧ ಕಲಾಕೃತಿ

ಮಂಜೇಶ್ವರ : ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಹಾಗೂ ಪೋಷಣೆ ಸಿಕ್ಕರೆ ಮಕ್ಕಳು ನ್ನಷ್ಟು ಉನ್ನತ ಮಟ್ಟಕ್ಕೆ ಏರುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆ ಬಿ.ಎಸ್ ನಗರದ ಭಿನ್ನ ಚೇತನರಾಗಿರುವ ಕೆ.ನಾಸರ್ ಹಾಗೂ ಜುಬೈದ ದಂಪತಿಗಳ ಪುತ್ರ ಅಬೂಬಕ್ಕರ್ ಮಕ್ಸೂದ್.

ಉದ್ಯಾವರ ಅಲ್ ಸಖಾಫ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ತನ್ನ ಕೈ ಚಳಕದಿಂದ ಈಗಾಗಲೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿತ್ರಕಲೆಯಲ್ಲಿ ಅದ್ಭುತ ಸಾಧನೆಯನ್ನು ಮಾಡಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಚಿತ್ರಕಲೆಯಲ್ಲಿ ಪರಿಣಿತಿ ಹೊಂದಿ ಉಪ ಜಿಲ್ಲಾ ಮಟ್ಟದಲ್ಲಿ ಹಲವೆಡೆ ನಡೆದ ಹಲವು ಚಿತ್ರಕಲಾ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿದ್ದಾನೆ.

ಪ್ರೋತ್ಸಾಹಕ್ಕೆ ತಕ್ಕಂತೆ ಆಸಕ್ತಿಯನ್ನು ಮುಂದುವರಿಸಿದ ಮಕ್ಸೂದ್ ರಟ್ಟಿನಿಂದ ಆಟೋರಿಕ್ಷಾವೊಂದನ್ನು ತಯಾರಿಸಿದ್ದಾನೆ. ಫಾರೆನ್ಸಿಕ್ ಶೀಟ್ ನಲ್ಲಿ ಬಸ್ಸು, ಲಾರಿ, ಜೀಪು ಮುಂತಾದ ವಾಹನಗಳ ರೂಪವನ್ನು ಸೃಷ್ಟಿ ಮಾಡುತ್ತಿದ್ದ. ಆಮೇಲೆ ಚಿತ್ರಕಲೆಯಿಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಈತ ಶಾಲಾ ಉಪಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿದ್ದಾನೆ.

ಅದೇ ರೀತಿ ಶಾಲಾ ಕಲೋತ್ಸವಗಳಲ್ಲಿ ‘ಪೆನ್ಸಿಲ್ ಡ್ರಾಯಿಂಗ್, ವಾಟರ್ ಕಲರ್, ಕಾರ್ಟೂನ್ ಡ್ರಾಯಿಂಗ್ ಮೊದಲಾದ ಸ್ಪರ್ಧೆಗಳಲ್ಲೂ ಮಿಂಚಿರುವ ಈ ಬಾಲಕ ಹಲವು ವ್ಯಕ್ತಿತ್ವಗಳನ್ನು ಚಿತ್ರಿಸಿಕೊಂಡು ಇದೀಗ ಎಲ್ಲರ ಗಮನ ಸೆಳೆಯುತಿದ್ದಾನೆ. ಮನೆಯಲ್ಲಿರುವ ಸಣ್ಣ ಒಂದು ಕೊಠಡಿಯಲ್ಲಿ ತಾನು ಮಾಡಿದ ಕಲಾಕೃತಿಗಳನ್ನು ಜೋಪಾನವಾಗಿ ಇಟ್ಟಿದ್ದಾನೆ.

Related Posts

Leave a Reply

Your email address will not be published.