ಮೂಡುಬಿದಿರೆಯಲ್ಲಿ ಶ್ರೀ ಕೃಷ್ಣ ಗಾರ್ಮೆಂಟ್ಸ್ ಕಾರ್ಯಾರಂಭ

ಮೂಡುಬಿದಿರೆ: ಯಾವುದೇ ಉದ್ಯಮದಲ್ಲಿ ಏಳುಬೀಳುಗಳು ಸಹಜ. ಸಂಯಮ, ತಾಳ್ಮೆಯಿಂದ ಇದನ್ನು ಎದುರಿಸಿ ಮುನ್ನಡೆಯಬೇಕು. ಉದ್ಯಮದ ಯಶಸ್ಸಿಗೆ ವ್ಯವಹಾರದಲ್ಲಿ ಚಾಕಚಕ್ಯತೆ ಮುಖ್ಯ. ಸ್ಪರ್ಧೆ ಇದ್ದಾಗ ಗುಣಮಟ್ಟವು ಹೆಚ್ಚುತ್ತದೆ. ಈ ಸಂಸ್ಥೆಯು ಗ್ರಾಹಕರ ಆಶೋತ್ತರಗಳನ್ನು ಈಡೇರಿಸಿ ಮುನ್ನಡೆಯಲಿ ಎಂದು ಮೂಡುಬಿದಿರೆ ಶ್ರೀಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಶುಭ ಹಾರೈಸಿದರು.
ಪೇಟೆಯ ವಿಜಯನಗರದಲ್ಲಿ ಆರಂಭಗೊಂಡ ಶ್ರೀಕೃಷ್ಣ ಗಾರ್ಮೆಂಟ್ಸ್-ನೂತನ ಬಟ್ಟೆ ತಯಾರಿ ಘಟಕ, ಸಿಲ್ಕ್ ಸೀರೆ ಶೋ ರೂಮ್, ಬಟ್ಟೆ ಮಳಿಗೆ, ಫಾನ್ಸಿ ಸ್ಟೋರ್ ಹಾಗೂ ಪಾದರಕ್ಷೆ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಮಾನ್ಸಿ ಸಾರಿ ಸೆಂಟರ್ ಅನ್ನು ಲೀಲಾ ಹರಿಯಪ್ಪ ಶೆಟ್ಟಿ ಬಿರಾವು ಉದ್ಘಾಟಿಸಿದರು. ಅಮರನಾಥ ಶೆಟ್ಟಿ ಯೂನಿಫಾರ್ಮ್ ಸ್ಟೋರ್, ಹೊಲಿಗೆ ಯಂತ್ರಗಳಿಗೆ ಹಾಗೂ ಓವರ್ಲಾಕ್ ಯಂತ್ರಗಳಿಗೆ ಚಾಲನೆ ನೀಡಲಾಯಿತು. ಸುದರ್ಶನ್ ಟೆಕ್ಸ್ಟೈಲ್ಸ್, ಅಶೋಕ್ ಫಾನ್ಸಿ ಸೆಂಟರ್, ಮಹಿನ್ ಫೂಟ್ವೇರ್ ಉದ್ಘಾಟಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಗಾರ್ಮೆಂಟ್ಸ್ ಉದ್ಘಾಟಿಸಿ, ಮೂಡುಬಿದಿರೆಯಲ್ಲಿ ಅಪಾರ ವಿದ್ಯಾರ್ಥಿ ಸಮೂಹವಿದ್ದು, ವಿದ್ಯಾರ್ಥಿಗಳಿಗೆ ಅಗತ್ಯವಾದ ಸಮವಸ್ತ್ರಗಳಿಗೆ ಬೇಡಿಕೆ ಇದೆ. ವಿದ್ಯಾಸಂಸ್ಥೆಗಳ ಈ ಅವಶ್ಯಕತೆಗಳಿಗೆ ಸ್ಪಂದಿಸಿ ಸಮಯಕ್ಕೆ ಸರಿಯಾಗಿ ಪೂರೈಸಬೇಕು. ಆಗ ಸಂಸ್ಥೆಯು ಉತ್ತಮವಾಗಿ ಬೆಳೆಯಲು ಸಾಧ್ಯ. ನನ್ನ ಸಂಸ್ಥೆಯಿಂದ ಎಲ್ಲ ರೀತಿಯ ಪ್ರೋತ್ಸಾಹ ನೀಡುವುದಾಗಿ ಹೇಳಿದರು. ಧನಲಕ್ಷಿ?ಮೀ ಸಮೂಹ ಸಂಸ್ಥೆಗಳ ಮುಖ್ಯಸ್ಥ ಕೆ.ಶ್ರೀಪತಿ ಭಟ್ ಅಧ್ಯಕ್ಷತೆವಹಿಸಿ ಮಾತನಾಡಿ, ದೇಶದಲ್ಲಿ ಅತೀ ಹೆಚ್ಚು ವಿದೇಶಿ ವಿನಿಮಯವಾಗುತ್ತಿರುವುದು ಗಾಮೆಂಟ್ಸ್ ಉದ್ಯಮದಿಂದ ಇಲ್ಲಿಯೂ ಈ ಉದ್ಯಮಕ್ಕೆ ವಿಫುಲ ಅವಕಾಶವಿದೆ. ಆದರೆ ಉದ್ಯಮದಲ್ಲಿ ಅವಸರ ಸಲ್ಲದು ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ.ಮುರಳಿಕೃಷ್ಣ ಕಂಪ್ಯೂಟರ್ಗೆ ಚಾಲನೆ ನೀಡಿದರು.
ಸಂಸ್ಥೆಯ ಮೊದಲ ಗ್ರಾಹಕ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಶ್ರೀಕಾಂತ್ ಕಾಮತ್, ಶ್ರೀಮಹಾವೀರ ಪಿಯು ಕಾಲೇಜು ಪ್ರಾಂಶುಪಾಲ ಪೆÇ್ರ.ರಮೇಶ್ ಭಟ್, ರೋಟರಿ ಎಜ್ಯುಕೇಶನ್ ಸೊಸೈಟಿಯ ಸಂಚಾಲಕ ಪ್ರವೀಣ್ಚಂದ್ರ, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಆರಿಫ್, ಶ್ರೀ ಮಹಾವೀರ ಕಾಲೇಜಿನ ನಿವೃತ್ತ ಉಪನ್ಯಾಸಕ ಅಜಾಜ್ ಅಹ್ಮದ್, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಮೂಡಾ ಅಧ್ಯಕ್ಷ ಮೇಘನಾಥ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ಪ್ರವರ್ತಕಿ ರಶ್ಮಿ ಸುರೇಶ್ ಶೆಟ್ಟಿ, ನಿವೃತ್ತ ಸೈನಿಕ ಡೊಂಬಯ್ಯ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಜಿಲ್ಲಾ ಕೈಗಾರಿಕ ಕೇಂದ್ರದ ಜಾಹ್ನವಿ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯಸ್ಥ ಸುರೇಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಮಲ್ಲಿಕಾ ಅಜಿತ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.