ಮೂಡುಬಿದರೆ : ಜೈನ ಮುನಿಯ ಹತ್ಯೆ ಪ್ರಕರಣ, ಜೈನ ಸಮುದಾಯದಿಂದ ಪ್ರತಿಭಟನೆ

ಬೆಳಗಾಂ ಜಿಲ್ಲೆಯ ಚಿಕ್ಕೋಡಿ ಹಿರೇಕೊಡಿಯ ಪರಮಪೂಜ್ಯ ಆಚಾರ್ಯ 108 ಶ್ರೀ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಜೈನ ಸಮಾಜದ ಮುನಿ ಸಂತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮೂಡುಬಿದಿರೆಯ ಸಮಸ್ತ ಜೈನ ಸಮುದಾಯದ ಬಾಂಧವರು ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

moodabidre protest jaina muni murder

ಇದಕ್ಕೂ ಮೊದಲು ಸಾವಿರ ಕಂಬದ ಬಸದಿಯಲ್ಲಿ ಖಂಡನಾ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಮೂಡುಬಿದಿರೆ ಜೈನ ಮಠದ ಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಅವರು ಪರಮಪೂಜ್ಯರು 15 ವರುಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಪಾಠಶಾಲೆ ಮತ್ತು ಧಾರ್ಮಿಕ ಜಾಗೃತಿಯ ಕೆಲಸವನ್ನು ಮಾಡುತ್ತಾ ಬರುತ್ತಿದ್ದರು ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಸ್ವಾಮೀಜಿಗೆ ಚಿತ್ರ ಹಿಂಸೆ ನೀಡಿ ಹತ್ಯೆಗೈದು ದೇಹವನ್ನು ಬೋರ್ ವೆಲ್ ನಲ್ಲಿ ಹಾಕಿರುವುದು ಅಪರೂಪದ ಘಟನೆ. ಅಮಾಯಕ ಸ್ವಾಮೀಜಿಗೆ ರಕ್ಷಣೆ ಇಲ್ಲದಂತ್ತಾಗಿದೆ ಈ ಘಟನೆಯನ್ನು ಎಲ್ಲಾ ಸಮುದಾಯದವರು ಖಂಡಿಸಿ ಬೇಕಾಗಿದೆ ಸಂಬಂಧಪಟ್ಟ ಇಲಾಖೆಗಳು ಹತ್ಯೆಗೈದವರಿಗೆ ಸೂಕ್ತವಾದ ಶಿಕ್ಷೆಯನ್ನು ನೀಡಿ ನ್ಯಾಯವನ್ನು ಒದಗಿಸಬೇಕಾಗಿದೆ ಎಂದರು.

moodabidre protest jaina muni murder

ಬಸದಿಯ ಮೊಕ್ತೇಸರರಾದ ಸುಧೇಶ್ ಕುಮಾರ್, ದಿನೇಶ್ ಕುಮಾರ್ ಅನಡ್ಕ, ಜೈನ್ ಮಿಲನ್ ನ ಅಧ್ಯಕ್ಷ ನಮಿರಾಜ್, ಮುಖಂಡರುಗಳಾದ ಯುವರಾಜ್ ಜೈನ್, ಪದ್ಮಪ್ರಸಾದ್ ಜೈನ್, ಬಾಹುಬಲಿ ಪ್ರಸಾದ್,ಶೈಲೇoದ್ರ ಕುಮಾರ್, ಸುಭಾಸ್ ಚೌಟ, ಪ್ರವೀಣ್ ಕುಮಾರ್, ಶ್ರೀಮತಿ ಶ್ವೇತಾ, ಮಿತ್ರಸೇನ ಮತ್ತಿತರರು ಈ ಸಂದರ್ಭದಲ್ಲಿದ್ದರು. ಮುಖಂಡರು.

Related Posts

Leave a Reply

Your email address will not be published.