ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್

ಮೂಡುಬಿದಿರೆ: ಮಹಾರಾಷ್ಟ್ರ ದ ಪುಣೆಯಲ್ಲಿರುವ ನೇತಾಜಿ ಸುಭಾಸ್ ಚಂದ್ರ ಬೋಸ್ ಮಿಲಿಟರಿ ಸ್ಕೂಲ್ ಸ್ಟೇಡಿಯಂ ನಲ್ಲಿ ನ್ಯಾಷನಲ್ ಕರಾಟೆ ಫೆಡರೇಶನ್ ಒಫ್ ಇಂಡಿಯಾ ಇತ್ತೀಚೆಗೆ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮೂಡುಬಿದಿರೆಯ ಆಲ್ ಬಿರ್ರ್ ಆಂಗ್ಲ ಮಾಧ್ಯಮ ಶಾಲೆ ಯ ವಿದ್ಯಾರ್ಥಿ ಮೊಹಮ್ಮದ್ ನಹ್ ಯಾನ್ 8 ವರ್ಷ ವಯೋಮಿತಿಯ 20 ಕೆಜಿ ಕುಮಿಟೆ ವಿಭಾಗ ದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗ ದಲ್ಲಿ ಬೆಳ್ಳಿ ಪಡೆದು ರಾಜ್ಯಕ್ಕೆ ಹಾಗೂ ಶಾಲೆ ಗೆ ಕೀರ್ತಿ ಯನ್ನು ತಂದಿರುತಾರೆ.
ಈ ಚಾಂಪಿಯನ್ ಶಿಪ್ ನಲ್ಲಿ ನೇಪಾಳ, ಭೂತನ್, ಶ್ರೀಲಂಕಾ, ಬಾಂಗ್ಲಾದೇಶ,ಇಂಡಿಯಾ ರಾಷ್ಟ್ರ ಗಳು ಭಾಗವಹಿಸಿದ್ದವು.
ಮೊಹಮ್ಮದ್ ನಹ್ ಯಾನ್ ಇವರು ರೆನ್ಸಿ ಮಹಮ್ಮದ್ ನದೀಮ್ ಅವರಿಂದ ತರಬೇತಿ ಯನ್ನು ಪಡೆಯುತ್ತಿದ್ದಾರೆ.

Related Posts

Leave a Reply

Your email address will not be published.