ಮೂಡುಬಿದಿರೆ: ಆಟೋ ರಿಕ್ಷಾ-ಬಸ್ ಮುಖಾಮುಖಿ ಡಿಕ್ಕಿ : ವೃದ್ಧೆ ಸಾವು
ಮೂಡುಬಿದಿರೆ: ಖಾಸಗಿ ಶಿಕ್ಷಣ ಸಂಸ್ಥೆಯ ಬಸ್ಸು ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿಯಾದ ಪರಿಣಾಮವಾಗಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ಮೃತಪಟ್ಟ ಸಂಪಿಗೆಯಲ್ಲಿ ನಡೆದಿದೆ.
ಸುರತ್ಕಲ್ ನ ಆಲಿಯಮ್ಮ (76) ಮೃತಪಟ್ಟ ವೃದ್ಧೆ. ಮೂಡುಬಿದಿರೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುರತ್ಕಲ್‌ನಿಂದ ಬೀಪಾತಿಮ್ಮ, ಆಯೀಷಾ ಹಾಗೂ ಆಲಿಯಮ್ಮ ಎಂಬವರು ಬರುತ್ತಿದ್ದ ಸಂದರ್ಭದಲ್ಲಿ ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಸಂಪಿಗೆಯಲ್ಲಿ ಮೂಡುಬಿದಿರೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಖಾಸಗಿ ಕಾಲೇಜಿನ ಬಸ್ ಡಿಕ್ಕಿ ಹೊಡೆದಿದೆ. ಈ ಸಂದರ್ಭ ತೀವೃವಾಗಿ ಗಾಯಗೊಂಡ ಆಲಿಯಮ್ಮ ಕೊನೆಯುಸಿರೆಳೆದಿದ್ದಾರೆ. ಉಳಿದಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಸ್ಸಿನ ಚಾಲಕ ಸಂದೇಶ್ ನಾಯ್ಕ್‌ನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.