ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಟೀನ್ಸ್ ಹೀರೊ ಹದಿಹರೆಯದ ಮಕ್ಕಳ ಪಾಲನೆ ಬೆಳವಣಿಗೆ ಕಾರ್ಯಗಾರ
ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಸಮಕಾಲಿನ ಪ್ರಪಂಚದಲ್ಲಿ ಹದಿ ಹರೆಯದ ತರುಣ ತರುಣಿಯರು ಎದುರಿಸುವ ಸಮಸ್ಯೆಗಳು ಮಕ್ಕಳ ಪಾಲನೆ ಮತ್ತು ಲಾಲಾನೇಯಲ್ಲಿ ಪೋಷಕರ ಪಾಡು ಈ ವಿಷಯದಲ್ಲಿ ಒಂದು ದಿನದ ಸೈಕಲಾಜಿಕಲ್ ಕಾರ್ಯಗಾರವನ್ನು ಆಯೋಜಿಸಲಾಯಿತು.
ಸುಮಾರು ನೂರ ಐವತ್ತು ಟೀನ್ಸ್ ಮತ್ತು ಅವರ ತಾಯಂದಿರು ಈ ಶಿಬಿರದಲ್ಲಿ ಬಾಗವಹಿಸಿ ಮಾಹಿತಿ ಪಡೆದು ಕೊಂಡರು. ಹದಿಹರೆಯದ ತರುಣ ತರುಣಿಯರ ಮಾನಸಿಕ ಹಾಗೂ ವ್ಯಕ್ತಿತ್ವದ ಆರೋಗ್ಯ ಪರಿಪಾಲನೆ, ಹೊಂದಾಣಿಕೆ ಮತ್ತು ಬೆಳವಣಿಗೆ ದೇಹದ ಬದಲಾವಣೆ ಮತ್ತು ಮನಸ್ಸಿನ ಬದಲಾವಣೆ ಎಂಬಿತ್ಯಾದಿ ವಿಷಗಳಲ್ಲಿ ಸಮಗ್ರ ಮಾಹಿತಿ ಯನ್ನು ವಿದ್ಯಾರ್ಥಿಗಳು ಪಡೆದು ಕೊಂಡರು. ಮೊಬೈಲ್ ಗೀಳು, ಮಾನಸಿಕ ಖಿನ್ನತೆ ಅದನ್ನು ಹೋಗಲಾಡಿಸುವ ವಿಧಾನಗಳು ಇದರ ಬಗ್ಗೆ ಮಾಹಿತಿ ನೀಡಲಾಯಿತು. ಪೋಷಕರು ವಿಶೇಷವಾಗಿ ತಾಯಂದಿರು ಗಮನಿಸಬೇಕಾದ ವಿಷಯಗಳನ್ನು ಹಂಚಿಕೊಳ್ಳ ಲಾಯಿತು.
ಈ ತರಬೇತಿ ಕಮ್ಮಟವನ್ನು ನೆಲ್ಯಾಡಿ ಎಸ್ ಎಚ್ ರಿಜಿನಲ್ ಸೆಂಟರ್ ನ ಹೃದಯಾರಾಮ್ ಕೌನ್ಸಿಲ್ ಸೆಂಟರ್ ನೆಲ್ಯಾಡಿ ಇದರ ನೇತೃತ್ವದಲ್ಲಿ ನಡೆಸಲಾಯಿತು. ಕೆ ಎಸ್ ಎಂ ಸಿ ಎ ನಿರ್ದೇಶಕರು ಅಲ್ಫೋನ್ಸ ಚರ್ಚ್ ನ ಧರ್ಮ ಗುರು ವಂದನಿಯ ಫಾ.ಶಾಜಿ ಮಾತ್ಯು ಉದ್ಘಾಟಿಸಿದರು. ರಿಜಿನಲ್ ಸುಪರಿಯರ್ ವಂದನಿಯ ಸಿಸ್ಟೆರ್ ಲಿಸ್ ಮಾತ್ಯು ಅಧ್ಯಕ್ಷತೆ ವಹಿದರು. ನಿಖಿಲ್ ಕಣ್ಣೂರು. ಡಾಕ್ಟರ್ ಸಿಸ್ಟೆರ್ ಪಾಲಕ್ಕಲ್, ಕೌನ್ಸೆಲ್ ಸಿಸ್ಟೆರ್ ಆಲ್ಫಿ, ಸಿಸ್ಟೆರ್ ಬ್ಲೆಸಿ ಮೊದಲಾದವರು ತರಬೇತಿ ನಡೆಸಿಕೊಟ್ಟರು.