ಪಡುಬಿದ್ರಿ: ಐದರ ಹರೆಯದ ಹಸುಳೆಗೆ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್
ಐದರ ಹರೆಯದ ಬಾಲೆಯನ್ನು ಬಿಸ್ಕೆಟ್ ಆಸೆ ತೋರಿಸಿ ತನ್ನ ಕೋಣೆಗೆ ಕರೆದು ಲೈಂಗಿಕ ದೌರ್ಜನ್ಯ ನಡೆಸಿದ ಕೃತ್ಯ ಪಡುಬಿದ್ರಿ ಕಾಮಗಾರಿ ಹಂತದಲ್ಲಿರುವ ಮಾತಾ ರೆಸಿಡೆನ್ಸಿಯಲ್ ಕಟ್ಟದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ವಿಕೃತ ಮನಸ್ಸಿನ ಕಾಮುಖ ಆರೋಪಿ ಕಲ್ಕತ್ತ ವೆಸ್ಟ್ ಬೆಂಗಾಲ್ ಮುರ್ಶಿದಾಬಾದ್ ನಿವಾಸಿ ಮಾಫಿಜುಲ್ ಶೇಖ್ಈತ ಪಡುಬಿದ್ರಿ ಅಂಚೆ ಕಛೇರಿ ಪಕ್ಕದ ನಿರ್ಮಾಣ ಹಂತದಲ್ಲಿರುವ ಮಾತಾ ರೆಸಿಡೆನ್ಸಿಯಲ್ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಅದೇ ಕಟ್ಟಡದ ಒಂದು ಕೋಣೆಯಲ್ಲಿ ವಾಸವಾಗಿದ್ದ.
ಕಲ್ಕತ್ತಾದ ಮತ್ತೊಂದು ಕುಟುಂಬ ಅದೇ ಕಟ್ಟಡದ ಕಾರ್ಮಿಕರಾಗಿ ದುಡಿಯುತ್ತಿದ್ದು, ಅವರು ಕೂಡಾ ಕುಟುಂಬ ಸಮೇತರಾಗಿ ಅದೇ ಕಟ್ಟಡದ ಮತ್ತೊಂದು ಪಾಶ್ವದಲ್ಲಿ ವಾಸವಾಗಿದ್ದರು. ಕೆಲಸಕ್ಕೆ ರಜೆ ಇದ್ದ ಕಾರಣ ಮಧ್ಯಾಹ್ನ ಸಮಯ ಆ ಕುಟುಂಬದ ಮಂದಿ ಒಳಗಡೆ ಮಲಗಿದ್ದರು. ಪುಟ್ಟ ಬಾಲಕಿ ಹೊರಗೆ ಆಟವಾಡುತ್ತಿದ್ದು, ಅಲ್ಲಿಗೆ ಬಂದ ವ್ಯಕ್ತಿ ಬಾಲಕಿಯನ್ನು ಬಿಸ್ಕೆಟ್ ಆಸೆ ತೋರಿಸಿ ತನ್ನ ಕೋಣೆಗೆ ಕರೆಯಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಐದರ ಹರೆಯದ ಈ ಬಾಲೆ ನೋವು ಎಂಬುದಾಗಿ ಕೂಗಿದಾಗ ಮನೆಮಂದಿಗೆ ವಿಚಾರ ತಿಳಿದಿದೆ. ಅವರು ಪಡುಬಿದ್ರಿ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.