ಪಡುಬಿದ್ರಿ: ಕೇವಲ ಸ್ಪರ್ಶದಿಂದಲೇ ನೋವು ನಿವಾರಣೆ ಮಾಡುವ ಶೇಷಾನಂದ..!!
ಕಾಲುಗಳಿಗಿಲ್ಲ ತನ್ನ ಬೇಕು ಬೇಡಗಳನ್ನು ಪೂರೈಸುವ ಶಕ್ತಿ… ಆದರೆ ಜನರ ಉದ್ಧಾರಕ್ಕೂ ಎಂಬಂತೆ ತನ್ನೆಲ್ಲಾ ಸುಖ ಸಂತೋಷಗಳನ್ನು ಬದಿಗೊತ್ತಿ,.. ತನ್ನಲ್ಲಿ ಅಡಕವಾಗಿರುವ ನೋವುಗಳನ್ನು ಮರೆತು ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾರೆ. ಇದೀಗ ಪಡುಬಿದ್ರಿಯ ಸುಜ್ಲಾನ್ ಕಾಲೋನಿಯ ಒಂದು ಮನೆಯಲ್ಲಿ ಜನರ ಸೇವೆಗೆ ಲಭ್ಯವಿದ್ದಾರೆ.
ಕೇರಳ ಮೂಲದ “ಶೇಷಾನಂದ” ವಯಸ್ಸು ಕೇವಲ ಮೂವತ್ತ ನಾಲ್ಕು, ವಿದ್ಯಾಭ್ಯಾಸ ರಹಿತವಾಗಿರುವ ಇವರು ಕನ್ನಡ, ಹಿಂದಿ, ಮಲಯಾಳಂ ಸಹಿತ ಬಹಳಷ್ಟು ಬಾಷೆಗಳನ್ನು ಮಾತನಾಡ ಬಲ್ಲರು, ಗುರುಗಳೇ ಹೇಳುವಂತೆ ಯಾವುದೋ ವಯಕ್ತಿಕ ಕಾರಣಕ್ಕೆ ಮನೆ ಬಿಟ್ಟು ಹೊರ ಬಂದ ಅವರು ಕಷ್ಟದ ಜೀವನ ಸಾಗಿಸಿದ್ದರ ಬಗೆಗೆ ವಿವರಿಸಿದರು.
ಕಳೆದ 28 ವರ್ಷಗಳಾಚೆ ನನ್ನ ನೋವಿಗೆ ಶಾಶ್ವತ ಪರಿಹಾವೊ ಎಂಬಂತೆ ಸುಬ್ರಹ್ಮಣ್ಯ ದೇವರ ಪರಮ ಭಕ್ತನಾದ ನನ್ನೊಂದಿಗೆ ನಾಗದೇವರು ನೇರ ಸಂವಾದ ನಡೆಸುವ ಮೂಲಕ ನನ್ನ ಜವಾಬ್ದಾರಿಯನ್ನು ತಿಳಿಸಿದಂತೆ, ಜನರ ನೋವಿಗೆ ಸ್ಪಂದಿಸುವ ಸೇವೆಗೆ ಮುಂದಾಗಿದ್ದೇನೆ ಎಂದು ಹೇಳುತ್ತಾರೆ ಶೇಷಾನಂದ ಅವರು..…
ಯಾವುದೇ ಹಳೆಯ ನೋವಾದರೂ ಸರಿ ಕೆಲವೇ ಹೊತ್ತಲ್ಲಿ ಸ್ಪರ್ಶ ಮಾತ್ರದಲ್ಲಿ ನಾಗದೇವರ ಕೃಪೆಯಿಂದ ಗುಣ ಪಡಿಸುವ ಸೇವೆಯಷ್ಟೇ ನನ್ನದು… ಈ ಸೇವೆಗೆ ಯಾವುದೇ ಫಲಾಪೇಕ್ಷೆ ನನ್ನದಲ್ಲ.. ಆಹಾರದ ಅಗತ್ಯವೂ ನನಗಿಲ್ಲ ಎನ್ನುತ್ತಾರೆ ಶೇಷಾನಂದ ಅವರು..…
ಈ ಬಗ್ಗೆ ಮಾತನಾಡಿದ ಗುರುಗಳ ಪವಾಢಕ್ಕೆ ಬೆರಗಾದ ಭಕ್ತರು ಹಾಗೂ ಅವರಿಗೆ ಪಡುಬಿದ್ರಿ ಆರ್.ಆರ್. ಕಾಲೋನಿಯ ಮನೆಯಲ್ಲಿ ಆಶ್ರಯ ನೀಡಿದ್ದ ಉಮಾನಾಥ್ ಅವರು, ನಾನು ಆಕಸ್ಮಿಕವಾಗಿ ಸಾಗರದ ನನ್ನ ಗೆಳೆಯ ಮನೆಯ ಪೂಜೆಯೊಂದರಲ್ಲಿ ಪಾಲ್ಗೊಂಡಿದ್ದೆ, ಪೂಜೆಗಾಗಿ ಅಲ್ಲಿಗೆ ಬಂದಿದ್ದ ಈ ಗುರುಗಳ ಪವಾಢದ ಬಗ್ಗೆ ತಿಳಿದುಕೊಂಡು ಅವರನ್ನು ಮರಳಿ ಸುಬ್ರಹ್ಮಣ್ಯಕ್ಕೆ ಹೋಗುವಾಗ ಮನೆಗೆ ಭೇಟಿ ನೀಡುವಂತೆ ವಿನಂತಿಸಿದ ಮೇರೆಗೆ ಇಲ್ಲಿಗೆ ಬಂದಿದ್ದಾರೆ. ಇದೀಗ ಅವರು ಕಳೆದ ಸುಮಾರು ಒಂದು ತಿಂಗಳಿಂದ ನಮ್ಮ ಮನೆಯಲ್ಲೇ ಇದ್ದು, ಅದೇಷ್ಟೋ ಜನರ ನೋವು ನಿವಾರಣೆ ಮಾಡುವ ಮೂಲಕ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರು.