ಪಡುಬಿದ್ರಿ ; ಟ್ಯಾಂಕರ್ ಮತ್ತು ಸ್ಕೂಟರ್ ನಡುವೆ ಢಿಕ್ಕಿ – ಸ್ಕೂಟರ್ ಸಹಸವಾರನಿಗೆ ಗಂಭೀರ ಗಾಯ
ಟ್ಯಾಂಕರ್ ಹಾಗೂ ಸ್ಕೂಟರ್ ನಡುವೆ ಅಪಘಾತವಾದ ಘಟನೆ ಪಡುಬಿದ್ರಿಯ ಕನ್ನಂಗಾರಿನಲ್ಲಿ ನಡೆದಿದೆ. ಅಪಘಾತದಲ್ಲಿ ಸ್ಕೂಟರ್‍ನ ಹಿಂಬದಿ ಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ದಾಖಲಿಸಲಾಗಿದೆ.
ಯುಪಿ ಮೂಲದ ಇಬ್ಬರು ಸ್ಕೂಟರ್ ಏರಿಕೊಂಡು ಹೆಜಮಾಡಿ ಒಳ ರಸ್ತೆಯಿಂದ ಕನ್ನಂಗಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಎಂಟ್ರಿ ಕೊಡುತ್ತಿದಂತೆ, ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಸ್ಕೂಟರ್‍ನ ಹಿಂಬದಿ ಸವಾರರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.