ಪಡುಬಿದ್ರಿ : ಚುನಾವಣಾ ಪೂರ್ವ ಪೊಲೀಸ್ ಪಥ ಸಂಚಲನ
ಮುಂದಿನ ವಿಧಾನ ಸಭೆ ಚುನಾವಣೆ ನಿರ್ಭೀತಿಯಾಗಿ ನಡೆಯ ಬೇಕೆಂಬ ಉದ್ದೇಶದಿಂದ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗಜ್ಜಿ ನೇತ್ರತ್ವದಲ್ಲಿ ಪಡುಬಿದ್ರಿ ಕಾರ್ಕಳ ರಸ್ತೆಯಿಂದ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರಗೆ ಪೊಲೀಸ್ ಹಾಗೂ ಕೇಂದ್ರಿಯ ಮೀಸಲು ಪಡೆ ಸಿಬ್ಬಂದಿಗಳ ಪಥಸಂಚಲನ ನೆರವೇರಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಿವೈಎಸ್ಪಿ ಇದು ಸಾರ್ವಜನಿಕರನ್ನು ಹೆದರಿಸಲು ಮಾಡಿದ ಪ್ರಯತ್ನವಲ್ಲ, ಜನರಿಗೆ ಧೈರ್ಯ ತುಂಬಲು ಹಾಗೂ ಜನರು ತಮ್ಮ ಹಕ್ಕು..ಮತ ಚಲಾಯಿಸಲು ಯಾರಿಗೂ ಹೆದರ ಬೇಕಾಗಿಲ್ಲ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂಬ ಸಂದೇಶ ಸಾರುವುದೇ ಈ Vibe ಸಂಚಲನದ ಉದ್ಧೇಶವಾಗಿದೆ ಎಂದರು.
ಪ್ರಮುಖವಾಗಿ ಕಾಪು ಸರ್ಕಲ್ ಕೆ.ಸಿ. ಪೂವಯ್ಯ, ಪಡುಬಿದ್ರಿ ಎಸ್ಸೈ ಪುರುಷೋತ್ತಮ್, ಶಿರ್ವ ಎಸ್ಸೈ ರಾಘವೇಂದ್ರ, ಕಾಪು ಕ್ರೈಂ ಎಸ್ಸೈ ಭರತೇಶ್, ಶಿರ್ವ ಕ್ರೈಂ ಎಸ್ಸೈ ಅನಿಲ್ ನಾಯಕ್, ಪಡುಬಿದ್ರಿ ಕ್ರೈಂ ಎಸ್ಸೈ ಶಿವರುದ್ರಮ್ಮ, ಸಿ ಆರ್ ಪಿ ಮುಖ್ಯಸ್ಥ ತಾರಕೇಶ್ವರ್ ಭಾಗವಹಿಸಿದ್ದರು.