ಸಂಸದರ ಅಮಾನತು 141ಕ್ಕೆ ಏರಿಕೆ
ಸಂಸತ್ ಭದ್ರತಾ ಲೋಪದ ಬಗೆಗೆ ಗೃಹ ಮಂತ್ರಿ ಅಮಿತ್ ಶಾರಿಂದ ವಿವರಣೆ ಬಯಸುತ್ತಿರುವ ಪ್ರತಿಪಕ್ಷಗಳ ಬೇಡಿಕೆಗೆ ಸ್ಪಂದಿಸದ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ 49 ಲೋಕ ಸಭಾ ಸದಸ್ಯರನ್ನು ಅಮಾನತು ಮಾಡಿದರು.
ಇದರಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆಯು 141ಕ್ಕೆ ಏರಿದೆ. ಉಕ್ಕಿನ ಮನುಷ್ಯನೋ ಸೊಕ್ಕಿನ ಮನುಷ್ಯನೋ ಎಂದು ಅಮಾನತುಗೊಂಡವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರುಗಳನ್ನು ಟೀಕಿಸಿದ್ದಾಗಿಯೂ ಹೇಳಲಾಗಿದೆ. ಸಂಸತ್ತಿನ ಹೊರಗೆ ಅಮಾನತುಗೊಂಡ ಸರ್ವ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಆಗ ರಾಜ್ಯಸಭಾ ಸಭಾಪತಿ ಜಗದೀಪ್ ದನ್ಕರ್ ಅವರನ್ನು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿಯವರು ಮಿಮಿಕ್ರಿ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.