ಮೇ.26ರಂದು ಪಿರ್ಕಿಲು ತುಳು ಸಿನಿಮಾ ತೆರೆಗೆ
ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ ಮತ್ತು ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಪಿರ್ಕಿಲು ತುಳು ಸಿನಿಮಾ ಮೇ.26ರಂದು ಕರಾವಳಿ ಜಿಲ್ಲೆಯಾದ್ಯಂತ ತೆರಕಾಣಲಿದೆ ಎಂದು ನಿರ್ದೇಶಕ ಹೆಚ್.ಡಿ ಆರ್ಯ ಹೇಳಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸ್ಯ ಮತ್ತು ಕೌಟುಂಬಿಕ ಕಥಾ ಹಂದರ ಹೊಂದಿರುವ ಚಿತ್ರ ಇದ್ದಾಗಿದ್ದು, ಪಿರ್ಕಿಲು ಎಂದು ಊರಿನ ಜನರಿಂದ ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರಗಳನ್ನು ಸೃಷ್ಟಿ ಮಾಡುತ್ತಾರೆ ಎಂಬುದನ್ನು ಹಾಸ್ಯಭರಿತವಾಗಿ ಸಂದೇಶ ಸಾರುವ ಒನ್ ಲೈನ್ ಸ್ಟೋರಿಯ ಚಿತ್ರವಾಗಿದೆ ಎಂದು ಅವರು ತಿಳಿಸಿದರು.
ಕರಾವಳಿಯ ವಿವಿಧ ಚಿತ್ರಮಂದಿರದಲ್ಲಿ ಏಕಕಾಲದಲ್ಲಿಯೇ ಚಿತ್ರ ತೆರಕಾಣಲಿದ್ದು, ತಾರಾ ಬಳಗದಲ್ಲಿ ತುಳನಾಡ ಮಾಣಿಕ್ಯ ಅರವಿಂದ ಬೋಳಾರ್, ನವರಸರಾಜ ಬೋಜರಾಜ ವಾಮಂಜೂರು, ಕಾಮಿಡಿ ಹಿಟ್ಲರ್ ದೀಪಕ್ ರೈ ಪಾಣಜೆ, ರವಿರಾಮಕುಂಜ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕ ನಟರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿಸೋಜಾ, ಲತಾ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸುಮಿತ್ರ ರೈ, ಅಮಿತ, ನವೀನ್ ಬೊಂದೇಲ್, ಅರ್ಪಣ್, ಅನಿಲ್ ರೈ ,ರಂಜಿತ್ ರೈ, ತಿಮ್ಮಪ್ಪ ಕುಲಾಲ್, ಪ್ರಭಾಕರ್ ಶೆಟ್ಟಿ, ಮೋಹನ್ ಸೊನಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ನಟ ಸುದೇಶ್, ನಿರ್ಮಾಪಕ ಶಿವಪ್ರಸಾದ್ ಇಜ್ಜಾವು, ಛಾಯಾಗ್ರಾಹಕ ಎ.ಆರ್.ಕೃಷ್ಣ, ಅಲಿಶಾ, ಲತಾ ಉಪಸ್ಥಿತರಿದ್ದರು