ಶಾಸಕ ಯಶ್‍ಪಾಲ್ ಸುವರ್ಣ ಹೇಳಿಕೆಗೆ ಕಾಂಗ್ರೆಸ್‍ನಿಂದ ಖಂಡನೆ
ಬಿಜೆಪಿ ಪ್ರತಿಭಟನೆ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗೃಹ ಸಚಿವರ ಕೌಟುಂಬಿಕ ವಿಚಾರಗಳ ಬಗ್ಗೆ ನೀಡಿರುವ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಪ್ರಸಾದ ರಾಜ್ ಕಾಂಚನ್ ಅವರು, ಕಾಲೇಜಿನಲ್ಲಿ ನಡೆದಿರುವ ವಿಡಿಯೊ ಪ್ರಕರಣದಲ್ಲಿ ಪೆÇಲೀಸರು ನಿಷ್ಪಕ್ಷಪಾತ ತನಿಖೆಯನ್ನ ನಡೆಸಿದ್ದಾರೆ. ಕಾಲೇಜಿನ ಅಡಳಿತ ಮಂಡಳಿ ಕೂಡ ಪೊಲೀಸ್ರ ತನಿಖೆಗಳಿಗೆ ಸಹಕರಿಸಿದ್ದಾರೆ. ಅದರೂ ಕೂಡ ಬಿಜೆಪಿ ಇಲ್ಲಿ ಎನು ಸಾಧಿಸೋಕೆ ಹೊರಟಿದೆ ಅನ್ನೋದೇ ಗೊತ್ತಗ್ತಾ ಇಲ್ಲ. ಉಡುಪಿ ಶಾಸಕರು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಬದಲು ತಮ್ಮ ವರ್ಚಸ್ಸನ್ನು ತೋರಿಸುವ ಸಲುವಾಗಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.