ನನ್ನ ಪತಿಯನ್ನು ಉದ್ದೇಶ ಪೂರ್ವಕವಾಗಿ ಆರೋಪಿ ಮಾಡಲಾಗಿದೆ: ಶಫೀಕ್ ಪತ್ನಿ ಅನ್ಸಿಫಾ.
ನನ್ನ ಪತಿ ಆರೋಪಿಯಲ್ಲ. ಅವರನ್ನು ಮನೆಯಿಂದ ತನಿಖೆ ಇದೆ ಎಂದು ಪೆÇಲೀಸರು ಕರೆದುಕೊಂಡು ಹೋಗಿದ್ದಾರೆ. ಇದೀಗ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಶಫೀಕ್ ಪತ್ನಿ ಅನ್ಸಿಫಾ ಆರೋಪ ಮಾಡಿದ್ದಾರೆ. ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಯ ತನಿಖೆಯು ಪ್ರಗತಿಯಲ್ಲಿದೆ. ಇಬ್ಬರು ಆರೋಪಿಗಳಾದ ಝಕೀರ್ ಮತ್ತು ಶಫೀಕ್ ಅವರ ಬಂಧನವನ್ನು ಎಡಿಜಿಪಿ ಅಲೋಕ್ ಕುಮಾರ್ ಮತ್ತು ಎಸ್ಪಿ ರಿಷಿಕೇಶ್ ಸೋನಾವಣೆ ದೃಢಪಡಿಸಿದ್ದಾರೆ.
ಈ ನಡುವೆ ಶಫೀಕ್ ಬೆಳ್ಳಾರೆ ಅವರ ಪತ್ನಿ ಅನ್ಸಿಫಾ ಬೆಳ್ಳಾರೆ ಪೆÇಲೀಸ್ ಠಾಣೆಗೆ ಬಂದು, ನನ್ನ ಪತಿ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಆರೋಪಿಯಲ್ಲ. ಅವರನ್ನು ಉದ್ದೇಶ ಪೂರ್ವಕವಾಗಿ ಆರೋಪಿಯನ್ನಾಗಿ ಮಾಡಲಾಗಿದೆ. ಮನೆಯಲ್ಲಿದ್ದ ಅವರನ್ನು ತನಿಖೆ ಇದೆ ಎಂದು ಪೆÇಲೀಸರು ಕರೆದುಕೊಂಡು ಹೋಗಿದ್ದಾರೆ. ನಮಗೆ ಅವರನ್ನು ನೋಡಲೂ ಸಹ ಬಿಡುತ್ತಿಲ್ಲ. ಅವರನ್ನು ಕರೆದುಕೊಂಡು ಬಂದು 24 ಗಂಟೆಗಳು ಕಳೆದಿದೆ. ಇದೀಗ ಆರೋಪಿ ಎನ್ನುತ್ತಿದ್ದಾರೆ. ಅವರು ಕೊಲೆ ಆರೋಪಿಯಲ್ಲ ಎಂದು ಅನ್ಸಿಫಾ ಹೇಳಿದ್ದಾರೆ.
ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲೇ ವೈದ್ಯರು ಆರೋಪಿಗಳ ಆರೋಗ್ಯ ತಪಾಸಣೆ ನಡೆಸಿದ್ದು, ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಜೆ ಪ್ರವೀಣ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಪೆÇಲೀಸರಿಂದ ಬಂಧಿಸಲ್ಪಟ್ಟ ಬೆಳ್ಳಾರೆ ಮೂಲದ ಶಫೀಕ್ ಕೆಲಸ ಮಾಡುತ್ತಿದ್ದ, ಗುತ್ತಿಗಾರಿನ ಅಡಿಕೆ ಅಂಗಡಿಯನ್ನು ಆಕ್ರೋಶಿತರು ಧ್ವಂಸಗೊಳಿಸಿದ್ದಾರೆ. ಗುತ್ತಿಗಾರಿನಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.