ಇರುವೈಲು ಗ್ರಾ.ಪಂ.ನ ಪುದ್ದರಕೋಡಿಯಲ್ಲಿ ಅಪಾಯಕಾರಿ ಕಾಲು ಸಂಕ

ಮೂಡುಬಿದಿರೆ : ಅಡಿಕೆ ಮರವನ್ನು ಬಳಸಿ ನಿರ್ಮಿಸಿರುವ ಅಪಾಯಕಾರಿ ಕಾಲು ಸಂಕದಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಸಹಿತ ಸಾರ್ವಜನಿಕರು ಜೀವ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾ.ಪಂ ವ್ಯಾಪ್ತಿಯ ತೋಡಾರು ಗ್ರಾಮದ ಪುದ್ದರಕೋಡಿ ಜಯ ಶೆಟ್ಟಿ ಎಂಬವರ ಮನೆ ಬಳಿ ಎದುರಾಗಿದೆ.

ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ಕಾಲು ಸಂಕವು ಕಳೆದ ವರ್ಷ ಮನೆಯ ರಭಸಕ್ಕೆ ಕುಸಿದು ಹೋಗಿತ್ತು. ಆಗ ಅಡಿಕೆ ಮರಗಳನ್ನು ಬಳಸಿ ತಾತ್ಕಾಲಿಕ ಕಾಲು ಸಂಕವನ್ನು ನಿರ್ಮಿಸಲಾಗಿತ್ತು. ಪುದ್ದರಕೋಡಿಯಿಂದ ಬಾಲ್ದೊಟ್ಟು -ಕೊನ್ನೆಪದವು- ಕಲಸಂಕಕ್ಕೆ ಹೋಗುವ ದಾರಿ ಇದಾಗಿದೆ. ತೋಡಾರು ಪರಿಸರದಲ್ಲಿ ಸುಮಾರು 100 ಜನರು ಪ್ರತಿದಿನ ಈ ಕಾಲು ಸಂಕವನ್ನೇ ಬಳಸಿ ತಮ್ಮ ದಿನನಿತ್ಯದ ಕೆಲಸಕ್ಕಾಗಿ ನಡೆದುಕೊಂಡು ಹೋಗಬೇಕಾಗಿದೆ. ಅಲ್ಲದೆ ಹಳ್ಳಿ ಪ್ರದೇಶದಲ್ಲಿರುವ ತೋಡಾರು ಶಾಲೆಗೆ ಅಂಗನವಾಡಿ ಕೇಂದ್ರಕ್ಕೆ ಮತ್ತು ಪ್ರಾಥಮಿಕ ಶಾಲೆಗೆ ಸುಮಾರು 15ರಷ್ಟು ಪುಟ್ಟ ಪುಟ್ಟ ಮಕ್ಕಳು ಈ ಕಾಲುಸಂಕದಲ್ಲಿಯೇ ನಡೆದುಕೊಂಡು ಹೋಗಬೇಕಾಗಿದೆ.

ಮಕ್ಕಳನ್ನು ಒಬ್ಬೊಬ್ಬರನ್ನೇ ಕಳುಹಿಸಿದರೆ ಕಾಲು ಸಂಕದಿಂದ ಏನಾದರೂ ಅನಾಹುತ ಸಂಭವಿಸಬಹುದೆನ್ನುವ ಹೆದರಿಕೆಯಿಂದ ಹೆತ್ತವರೇ ತಮ್ಮ ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸಿ ನಂತರ ತಾವೇ ಕರೆದುಕೊಂದು ಬರುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

ಈ ಬಗ್ಗೆ ಗ್ರಾಮಸ್ಥರು ಪಂಚಾಯತ್ ನ ಗಮನಕ್ಕೆ ತರಲಾಗಿದೆ. ಆಗ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರು ಕಾಲುಸಂಕಕ್ಕೆ ಅನುದಾನ ಇಡಲಾಗಿದೆ ಎಂದು ಹೇಳಿದ್ದಾರೆ ಆದರೆ ಕಾಲುಸಂಕ ನಿರ್ಮಾಣದ ಇನ್ನೂ ಆಗಿಲ್ಲವೆಂದು ಗ್ರಾಮಸ್ಥ ಸಂತೋಷ್ ಜೈನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Related Posts

Leave a Reply

Your email address will not be published.