ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಕಾರು ಅಪಘಾತ
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರ ಕಾರು ಅಪಘಾತ ಪ್ರಾಣಪಾಯದಿಂದ ಪಾರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರ ಖಾಸಗಿ ಒಡೆತನದ ಕಾರೊಂದು ಪುತ್ತೂರು ಬೈಪಾಸ್ ರಸ್ತೆ ನೂಜಿ ಎಂಬಲ್ಲಿ ಡಿ.29 ರಂದು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ.
ಡಾ.ದೀಪಕ್ ರೈ ದಂಪತಿ ಸಮೇತ ಮಂಗಳೂರು ಕಡೆಯಿಂದ ಕಾರಿನಲ್ಲಿ ಬರುತ್ತಿದ್ದ ವೇಳೆ ಬೈಪಾಸ್ ರಸ್ತೆಯ ನೂಜಿ ಎಂಬಲ್ಲಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೆ ಡಿಕ್ಕಿಯಾಗಿ ನಿಂತಿದೆ. ಡಿಕ್ಕಿಯ ರಭಸಕ್ಕೆ ಕಾರಿನ ತುರ್ತು ರಕ್ಷಾ ಕವಚ ( ಬೆಲೂನ್ ) ತೆರೆದ ಕಾರಣ ದಂಪತಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.