ಪುತ್ತೂರು: ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

ಪುತ್ತೂರು: ಬೈಕೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬಸ್‌ಗೆ ಡಿಕ್ಕಿಯಾದ ಘಟನೆ ಸೆ.3ರಂದು ರಾತ್ರಿ ಪರ್ಲಡ್ಕ  ರಸ್ತೆಯಲ್ಲಿ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ವೀರಮಂಗಲದ ಭರತ್‌ರಾಜ್ ಗೌಡ ಎಂಬವರು ಮೃತಪಟ್ಟಿದ್ದಾರೆ.

ಪುತ್ತೂರು ಗಣೇಶೋತ್ಸವ ಶೋಭಾಯಾತ್ರೆಗೆಂದು ಬಂದಿದ್ದ ಕೊಳ್ತಿಗೆ ಪೆರ್ಲಂಪಾಡಿ ನಿವಾಸಿ ಜಯದೀಪ್ ಅವರ ಪುತ್ರ ಧನುಷ್(24ವ) ಮತ್ತು ವೀರಮಂಗಲ ಖಂಡಿಗ ಚಂದ್ರಶೇಖರ್ ಗೌಡ ಅವರ ಪುತ್ರ ಭರತ್ ರಾಜ್ ಗೌಡ(22ವ)ರವರು ಡ್ಯೂಕ್ ಬೈಕ್‌ನಲ್ಲಿ ಬಂದಿದ್ದು ಪರ್ಲಡ್ಕ ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಮಂಗಳೂರು ಕಡೆ ಹೋಗುತ್ತಿದ್ದ ಬಸ್‌ಗೆ ಹಿಂಬದಿಯ ಭಾಗಕ್ಕೆ ಡಿಕ್ಕಿಯಾಗಿದೆ. ಘಟನೆಯಿಂದ ತಲೆಗೆ ಗಂಭೀರ ಗಾಯಗೊಂಡ ಭರತ್‌ರಾಜ್ ಗೌಡ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಇನ್ನೋರ್ವ ಧನುಷ್ ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮಾನವೀಯೆ ಮೆರೆದ ಅಡಿಷನಲ್ ಎಸ್ಪಿ:

ಅಪಘಾತ ನಡೆದ ಸಂದರ್ಭ ಅದೇ ದಾರಿಯಲ್ಲಿ ಬರುತ್ತಿದ್ದ ‌ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಅವರು ತಕ್ಷಣ ಗಾಯಳುವನ್ನು ತನ್ನ ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದರು.

ಒಬ್ಬನೆ ಮಗನನ್ನು ಕಳೆದುಕೊಂಡ ಕುಟುಂಬ:

ವೀರಮಂಗಲ ಖಂಡಿಗ ನಿವಾಸಿ ಚಂದ್ರಶೇಖರ್ ಅವರು ಕೃಷಿಕರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದು, ಚಂದ್ರಶೇಖರ್ ದಂಪತಿಗೆ ಭರತ್‌ರಾಜ್ ಒಬ್ಬನೆ ಪುತ್ರ. ಆತನು ಕೂಡಾ ಐಟಿಐ ಶಿಕ್ಷಣದ ಜೊತೆಗೆ ಅಡಿಕೆ ಸುಳಿಯುವ ಕೆಲಸ ನಿರ್ವಹಿಸುತ್ತಿದ್ದರೆಂದು ಊರಿನವರು ಮಾಹಿತಿ ನೀಡಿದ್ದಾರೆ. ಇದೀಗ ಇದ್ದ ಒಬ್ಬ ಪುತ್ರನನ್ನು ಕಳೆದು ಚಂದ್ರಶೇಖರ್ ದಂಪತಿ ತೀವ್ರ ದುಖಃಕ್ಕೊಳಗಾಗಿದ್ದಾರೆ.

Related Posts

Leave a Reply

Your email address will not be published.