“ಕೋಟಿ-ಚೆನ್ನಯ” ಹೆಸರಿನಲ್ಲಿ ಬಸ್ ನಿಲ್ದಾಣ
ಪುತ್ತೂರು: ಇನ್ಮುಂದೆ ಪುತ್ತೂರು ಕೆಎಸ್‌ಆರ್‌ಟಿಸಿಗೆ ಬಸ್ ನಿಲ್ದಾಣಕ್ಕೆ ತುಳುನಾಡಿನ ಅವಳಿ ವೀರಪುತ್ರರ ಹೆಸರಿನಲ್ಲಿ “ಕೋಟಿ-ಚೆನ್ನಯ” ಬಸ್ ನಿಲ್ದಾಣ ಎಂಬುದಾಗಿ ನಾಮಕರಣ ಮಾಡಲು ಸರ್ಕಾರದ ಅನುಮೋದನೆ ನೀಡಿದೆ. ಈ ಹಿಂದೆ ಪಡುಮಲೆ ಕೋಟಿ ಚೆನ್ನಯ್ಯ ಸಂಚಲನ ಟ್ರಸ್ಟ್ ನಿಯೋಗದಿಂದ ಶಾಸಕ ಸಂಜೀವ ಮಠಂದೂರು ಅವರಿಗೆ ಈ ಬಗ್ಗೆ ಮನವಿ ನೀಡಲಾಗಿತ್ತು.ಈ ಪ್ರಸ್ತಾವನೆಯನ್ನು ಪರಿಶೀಲಿಸಿ, ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾ ಣಕ್ಕೆ “ಕೋಟಿ ಚೆನ್ನಯ ಬಸ್ ನಿಲ್ದಾಣ” ಎಂದು ನಾಮಕರಣ ಮಾಡಲು ಸರಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.