ಪುತ್ತೂರು: ದಿ. ಬೆಳ್ಯಪ್ಪ ಗೌಡ ಪೆರ್ಲಂಪಾಡಿ ಅವರಿಗೆ ನುಡಿನಮನ

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಬೆಳ್ಯಪ್ಪ ಗೌಡ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಪೆರ್ಲಂಪಾಡಿಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಬೆಳ್ಯಪ್ಪ ಗೌಡರು ಕಳೆದ 50 ವರ್ಷಗಳಿಂದ ಹೊಟೇಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದು, ಹಸಿವಿನಿಂದ ಬಂದವರಿಗೆ ಅನ್ನದಾತರಾಗಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಎಪ್ರಿಲ್ 7ರಂದು ನಿಧನರಾಗಿದ್ದರು. ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೊಳ್ತಿಗೆ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಕೆ.ಎಸ್. ವೆಂಕಟ್ರಮಣ ಗೌಡ ಕಟ್ಟಪುಣಿ, ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಕುಮಾರ್, ವಸಂತ್ ಕುಮಾರ್ ರೈ ದುಗ್ಗಳ, ಪತ್ರಕರ್ತ ಲೋಕೇಶ್ ಪೆರ್ಲಂಪಾಡಿ ಅವರು ಮಾತನಾಡಿ, ಬೆಳ್ಯಪ್ಪ ಗೌಡರ ಸೇವಾ ಕಾರ್ಯವನ್ನು ಸ್ಮರಿಸಿ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರಿದರು.

ಇದೇ ವೇಳೆ ಗ್ರಾಮದ ಪ್ರಮುಖರು, ಕುಟುಂಬಸ್ಥರು, ಬಂಧು ಮಿತ್ರರು ಬೆಳ್ಯಪ್ಪ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಿವಂಗತ ಬೆಳ್ಯಪ್ಪ ಗೌಡರ ಪತ್ನಿ ತಾರಾವತಿ, ಪುತ್ರರಾದ ಗುರುಪ್ರಸಾದ್, ಶ್ರೀದೇವಿ ಗುರುಪ್ರಸಾದ್, ನಿವೃತ್ತ ಸೈನಿಕ, ಪ್ರಸ್ತುತ ಪೊಲೀಸ್ ಸಿಬ್ಬಂದಿ ಹರಿಪ್ರಸಾದ್, ವನಿತಾ ಹರಿಪ್ರಸಾದ್, ಮಕ್ಕಳು, ಬಂಧುಮಿತ್ರರು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.