ಪುತ್ತೂರಿನ ಹಾರಾಡಿ ಶಾಲೆಯಲ್ಲಿ ಆವರಣಗೋಡೆ ಕುಸಿತ : ಪುತ್ತೂರು ನಗರಸಭೆ ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ

ಭಾರಿ ಮಳೆಗೆ ಪುತ್ತೂರು ನಗರ ಸಭಾ ವ್ಯಾಪ್ತಿಯ ಹಾರಾಡಿ ಸ.ಉ.ಹಿ.ಪ್ರಾ.ಶಾಲೆಯ ಆವರಣಗೋಡೆಯೊಂದು ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಪುತ್ತೂರು ನಗರಸಭೆ ಅಧ್ಯಕ್ಷರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿದ್ದಾರೆ.ಹಾರಾಡಿಯ ಶಾಲೆಯ ಹಿಂಬದಿಯ ಪ್ರಯಾಣಿಕರ ತಂಗುದಾಣದ ಬಳಿಯಲ್ಲಿರುವ ಆವರಣಗೋಡೆ ಕುಸಿದಿದೆ. ಘಟನಾ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸ್ಥಳೀಯ ಸದಸ್ಯೆ ಪ್ರೇಮಲತಾ ನಂದಿಲ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಭೇಟಿ,ನೀಡಿ ಪರಿಶೀಲನೆ ನಡೆಸಿದ್ರು.